ಅಪಾರ ಪ್ರಮಾಣದ ಕೃಷಿ ನಾಶ
ಕಳೆದೆರಡು ದಿನಗಳ ಕಾಲ ಏಮೇಕಲ್ ಚಡವು ಬಳಿ ಸಂಜೆ ವೇಳೆಗೆ ರಸ್ತೆ ಬದಿಯಲ್ಲಿ ನಿಂತು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದ್ದ ಒಂಟಿ ಸಲಗ ಇಂದು ಕಳೆದ ರಾತ್ರಿ ಶುಂಠ್ಯಡ್ಕದ ಐತಪ್ಪ ನಾಯ್ಕ ರವರ ಕೃಷಿ ತೋಟಕ್ಕೆ ದಾಳಿ ಮಾಡಿದ್ದು ಫಲಭರಿತ ಬಾಳೆ, ಅಡಿಕೆ ಮರ, ತೆಂಗಿನ ಮರ, ಕೊಕ್ಕೋ ಗಿಡಗಳು ಮತ್ತು ಇತರ ಕೃಷಿ ಬೆಳೆಗಳನ್ನು ನಾಶ ಪಡಿಸಿದೆ ಎಂದು ತಿಳಿದು ಬಂದಿದೆ.