ಸುಳ್ಯ ಕ್ರೀಡಾಭಾರತಿ ಘಟಕದ ಹಾಗೂ ವಿವೇಕಾನಂದ ವಿದ್ಯಾಸಂಸ್ಥೆ ವಿನೋಬನಗರ ಸಹಯೋಗದಲ್ಲಿ ಎರಡು ದಿನಗಳ ಉಚಿತ ತ್ರೋಬಾಲ್ ತರಬೇತಿ ಶಿಬಿರವು ಜಾಲ್ಸೂರು ಗ್ರಾಮದ ವಿವೇಕಾನಂದ ವಿದ್ಯಾಸಂಸ್ಥೆಯ ವಠಾರದಲ್ಲಿ ಎ.22 ಹಾಗೂ 23ರಂದು ನಡೆಯಲಿದೆ.
ತ್ರೋಬಾಲ್ ತರಬೇತಿ ಶಿಬಿರದಲ್ಲಿ ಉತ್ತಮ ತರಬೇತುದಾರರಿಂದ ತರಬೇತಿ ನೀಡಲಿದ್ದು, ಸುಳ್ಯ ತಾಲೂಕಿನ ಯುವತಿ ಮಂಡಲಗಳು, ಆಸಕ್ತ ಕ್ರೀಡಾಪಟುಗಳು ಸೇರಿದಂತೆ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ತ್ರೋಬಾಲ್ ತರಬೇತಿ ನಡೆಯಲಿದೆ ಎಂದು ತಿಳಿದುಬಂದಿದೆ.
ತರಬೇತಿಯಲ್ಲಿ ಉಪಹಾರದ ವ್ಯವಸ್ಥೆ ಇರುತ್ತದೆ. ಎ.20ರ ಮೊದಲು ಬರುವ ತಂಡಗಳ ಹೆಸರು ಮತ್ತು ಸಂಖ್ಯೆಯನ್ನು ತಿಳಿಸಿ. ಬರುವಾಗ ತ್ರೋಬಾಲ್ ಇದ್ದವರು ತರತಕ್ಕದ್ದಾಗಿದೆ.