ಮುರುಳ್ಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಬಯಲು ರಂಗ ಮಂದಿರ ಉದ್ಘಾಟನೆ ಮತ್ತು ಶಾಲಾ ಪ್ರತಿಭಾ ದಿನೋತ್ಸವವು ಎ.೧೪ರಂದು ನಡೆಯಿತು. ತಾ.ಪಂ. ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕರವರು ರಂಗಮಂದಿರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ.ಬಿ.ಆರ್. ಅಂಬೆಡ್ಕರ್ರವರ 131ನೇ ಜಯಂತಿಯ ಆಚರಣೆಯನ್ನು ಪುಷ್ಪ ನಮನ ಸಲ್ಲಿಸುವುದರ ಮೂಲಕ ವೇದಿಕೆಯಲ್ಲಿದ್ದ ಗಣ್ಯರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುರುಳ್ಯ ಗ್ರಾ.ಪಂ.ಅಧ್ಯಕ್ಷೆ ಕು.ಜಾನಕಿ ಶಾಂತಿನಗರ ವಹಿಸಿದ್ದರು.
ಗ್ರಾ.ಪಂ. ಸದಸ್ಯೆ ಶ್ರೀಮತಿ ಪುಷ್ಪಲತಾ ಕುಕ್ಕಟ್ಟೆ, ತಾ.ಪಂ.ಮಾಜಿ ಉಪಾಧ್ಯಕ್ಷೆ ಶ್ರೀಮತಿ ಶುಭದಾ ಎಸ್.ರೈ, ದ.ಕ.ಜಿ.ಪಂ.ಮಾಜಿ ಸದಸ್ಯೆ ಕು.ಭಾಗೀರಥಿ ಮುರುಳ್ಯ, ಪಂಜ ವಲಯ ಶಿಕ್ಷಣ ಸಂಯೋಜಕಿ ಶ್ರೀಮತಿ ಸಂಧ್ಯಾ ಕುಮಾರಿ, ಪಂಜ ಮತ್ತು ಎಣ್ಮೂರು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಜಯಂತ್ ಕೆ., ನಿವೃತ್ತ ಮುಖ್ಯೋಪಾಧ್ಯಾಯ ಬಾಲಕೃಷ್ಣ ಹೇಮಳ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕೆ.ಐ.ಒ.ಸಿ.ಎಲ್. ಬೆಂಗಳೂರಿನ ಶ್ರೀಮತಿ ಗೀತಾ ಹೆಚ್., ದಿ ಹೆಲ್ಪಿಂಗ್ ಗ್ರೂಪ್ ಚಾರಿಟೇಬಲ್ ಟ್ರಸ್ಟ್ನ ಎಂ.ಡಿ. ಮಂಜುನಾಥ,ಚೇರ್ಮೆ ನರಸಿಂಹಮೂರ್ತಿ, ಸೆಲ್ಕೋ ಸೋಲಾರ್ ಫೌಂಡೇಶನ್ನ ಗುರುಪ್ರಕಾಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದಾನಿಗಳಾದ ಶ್ರೀಮತಿ ಮಧು ವಿ.ಆರ್. ಹಾಗೂ ಯತೀಶ್ ಪಾಲೋಳಿಯವರು ಕೊಡುಗೆಯಾಗಿ ನೀಡಿದ ಶಾಲಾ ಮಹಾದ್ವಾರ, ಹಿರಿಯ ವಿದ್ಯಾರ್ಥಿ ಸಂಘದಿಂದ ಕಂಪ್ಯೂಟರ್, ಸೆಲ್ಕೋ ಸೋಲಾರ್ ಫೌಂಡೇಶನ್ನವರಿಂದ ಸೋಲಾರ್ ಸಿಸ್ಟಮ್, ಕೋಟೆ ಫೌಂಡೇಶನ್ ವತಿಯಿಂದ ತರಗತಿ ಕೊಠಡಿಗಳ ಟೈಲ್ಸ್ ಅಳವಡಿಕೆ, ಕೆ.ಐ.ಒ.ಸಿ.ಎಲ್. ಬೆಂಗಳೂರು ವತಿಯಿಂದ ಪ್ರೊಜೆಕ್ಟರ್ ಮತ್ತು ವಾಟರ್ ಪ್ಯೂರಿಫೈಯರ್ನ ಉದ್ಘಾಟನೆ ನೆರವೇರಿತು. ಕೋಟೆ ಫೌಂಡೇಶನ್ನ ಪ್ರದೀಪ್ ಎಂ. ಹಾಗೂ ಎಡಮಂಗಲ ಪ್ರಾ.ಕೃ.ಪ.ಸ.ಸಂಘ ನಿ. ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗ್ರಿಯವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ ಎಸ್.ಪಿ.ಯವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು.
ದತ್ತಿನಿದಿ ದಾನಿಗಳಾದ ಶ್ರೀಮತಿ ಮತ್ತು ಶ್ರೀ ಲಕ್ಕಣ್ಣ ರೈ ಅರಮನೆಗುತ್ತು ಕುತ್ತಮೊಟ್ಟೆ, ಶ್ರೀಮತಿ ಸುಶೀಲ ವಾಚಣ್ಣ ಗೌಡ ಮುರುಳ್ಯ, ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಭುವನೇಶ್ವರಿ ಕೆ.ಎಸ್., ನಿವೃತ್ತ ಪ್ರಾಂಶುಪಾಲ ಪ್ರೋ.ಆರ್. ವೇದವ್ಯಾಸ, ಮುರುಳ್ಯ ನಿವೃತ್ತ ಶಿಕ್ಷಕಿ ಶ್ರೀಮತಿ ಭುವನಮಣಿ, ಕೆ.ಕರುಣಾಕರ ಗೌಡ ಸ್ವರ್ಣಧಾಮ ಕೇರ್ಪಡ, ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಲೀಲಾವತಿ ರಾಘವ ಗೌಡ ಪಲ್ಲತಡ್ಕ, ನವೀನ್ ಕುಮಾರ್ ಬಿ.ಎಸ್.ಬೊಳ್ಕಜೆ, ನಿವೃತ್ತ ಮುಖ್ಯ ಶಿಕ್ಷಕ ಬಾಲಕೃಷ್ಣ ಹೇಮಳ ಸ್ಥಾಪಿಸಿದ ದತ್ತಿನಿಧಿಯನ್ನು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಅಧ್ಯಕ್ಷೀಯ ಭಾಷಣ, ಮುಖ್ಯ ಅತಿಥಿಗಳ ಭಾಷಣದ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಅಂಗನವಾಡಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಶಾಲಾ ವಿದ್ಯಾರ್ಥಿಗಳಾದ ರಾಜೇಶ್ವರಿ ರೈ, ತೃಷಾ ಹಾಗೂ ಶ್ರೇಯಾರವರು ಪ್ರಾರ್ಥಿಸಿದರು. ಎಸ್.ಡಿ.ಎಂ.ಸಿ.ಅಧ್ಯಕ್ಷೆ ಶ್ರೀಮತಿ ಮಧು ಪಿ.ಆರ್.,ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ಶಾಲಾ ಸಮಗ್ರ ಚಿತ್ರಣವನ್ನು ವರದಿಯ ಮೂಲಕ ವಾಚಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಲಕೃಷ್ಣ ನೂಜಾಡಿ ಸ್ವಾಗತಿಸಿ, ಅವಿನಾಶ್ ಡಿ.ದೇವರಮಜಲು ವಂದಿಸಿದರು. ಶ್ರೀಮತಿ ಪೂರ್ಣಿಮಾ ಜೆ., ಶ್ರೀಮತಿ ಭುವನ ಬಿ.ಆರ್., ಶ್ರೀಮತಿ ಅಶ್ವಿತಾ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಭವಾನಿ, ಶ್ರೀಮತಿ ಶಕುಂತಲ, ಕು.ರಶ್ಮಿ, ಶ್ರೀಮತಿ ಮಮತಾ, ಮಿಥುನ್, ಅಕ್ಷರ ದಾಸೋಹ ಸಿಬ್ಬಂದಿಗಳು, ಶಾಲಾ ವಿದ್ಯಾರ್ಥಿ ನಾಯಕಿ ಕು.ಪೂಜಾ ಹಾಗೂ ವಿದ್ಯಾರ್ಥಿ ವೃಂದ, ಎಸ್.ಡಿ.ಎಂ.ಸಿ. ಸರ್ವ ಸದಸ್ಯರು, ಪೋಷಕ ವೃಂದದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.