Breaking News

ಉಬರಡ್ಕದ ಕೋಡಿಯಡ್ಕದಲ್ಲಿ ಅಂಬೇಡ್ಕರ್ ದಿನಾಚರಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಆದಿದ್ರಾವಿಡ ಯುವ ವೇದಿಕೆ ನೇತೃತ್ವದಲ್ಲಿ ಡಾ. ಬಿರ್. ಅಂಬೇಡ್ಕರ್ ಅವರ 131ನೇ ವರ್ಷದ ಜಯಂತಿ ಕಾರ್ಯಕ್ರಮವನ್ನು ಸುಳ್ಯದ ಉಬರಡ್ಕ ಕೋಡಿಯಡ್ಕದಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಯುವ ವೇದಿಕೆಯ ಅಧ್ಯಕ್ಷರಾದ ರಾಮಚಂದ್ರ ಬಿ. ಕೆ ಕೊಯಿಲ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಆಮ್ ಆದ್ಮಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ವೀಕ್ಷಕರಾದ ಅಶೋಕ್ ಎಡಮಲೆ ಹಾಗೂ ಉಬರಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಿತ್ರಕುಮಾರಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹರೀಶ್ ರೈ ಉಬರಡ್ಕ, ಜ್ಞಾನದೀಪ ಶಾಲಾ ಶಿಕ್ಷಕರಾದ ಚಂದ್ರಶೇಖರ್ ಮೊರಂಗಲ್ಲು, ಆದಿದ್ರಾವಿಡ ಸಮಾಜ ಸೇವಾ ಸಂಘ ಇದರ ಕಾರ್ಯದರ್ಶಿಯಾದ ದಿಲೀಪ್ ಕೆ. ಎಲ್ ಹಾಗೂ ಜನಾರ್ದನ ಊರಿನ ಹಿರಿಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ. ಬಿರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಪ್ರಾರಂಭಿಸಲಾಯಿತು.

ರಮೇಶ್ ಬೂಡು ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ಶಾಲಾ ಕಾಲೇಜು ಮಕ್ಕಳಿಗೆ ಪುಸ್ತಕಗಳನ್ನು ನೀಡಿ ಶಿಕ್ಷಣಕ್ಕೆ ಪ್ರೋತ್ಸಾಹಿಸಲಾಯಿತು. ಕಾರ್ಯಕ್ರಮದಲ್ಲಿ ಬಿ ಎಡ್ ವಿದ್ಯಾರ್ಥಿಯಾದ ಮಾಲಿನಿ ಸ್ವಾಗತಿಸಿದರು. ಸತೀಶ್ ಬಿಳಿಯಾರು ಕಾರ್ಯಕ್ರಮವನ್ನು ನಿರೂಪಿಸಿದರು.

 

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.