ಭಾರತ ಸ್ವಾತಂತ್ರ್ಯ ಪಡೆಯುವುದರೊಂದಿಗೆ ಭ್ರಷ್ಟಾಚಾರ ಮೈಗೂಡಿಸಿಕೊಂಡು ಇದೀಗ ಪ್ರಜಾಪ್ರಭುತ್ವವೇ ಪರಿಹಾಸ್ಯಕ್ಕೆ ಒಳಗಾಗುತ್ತಿರುವುದು ಬಹಳ ನೋವಿನ ವಿಷಯ. ಹಿರಿಯರಾದ ಸುಧಾಮ ಆಲೆಟ್ಟಿ, ಕರುಣಾಕರ ಹಾಸ್ಪಾರೆ, ವಿ.ವಿ. ಬಾಲನ್, ಬಾಲಕೃಷ್ಣ ಅಡ್ಡಬೈಲು,ಕೃಷ್ಣ ಬೆಟ್ಟ, ಮಹಿಳಾ ಮೇಧಾವಿ ಶ್ರೀಮತಿ ರಾಜೀವಿ ಪರ್ಲಿಕಜೆ ಹಾಗೂ ಸುಳ್ಯ ತಾಲೂಕು ಪದಾಧಿಕಾರಿಗಳ ನೇತೃತ್ವದಲ್ಲಿ ಇತರ ಸಮಾಜಗಳಿಗೆ ಮಾದರಿ ಎನ್ನುವಂತೆ ಲಂಚ ಭ್ರಷ್ಟಾಚಾರ ಪಿಡುಗಿನ ವಿರುದ್ಧ ಯಾದವ ಸಮಾಜ ಸೆಟೆದು ನಿಂತದ್ದು ಪ್ರಶಂಸನೀಯ.
ಇನ್ನು ಮುಂದೆ ಯಾದವ ಸಮಾಜದ ಯಾವುದೇ ಸದಸ್ಯ ಯಾವುದೇ ಕಚೇರಿಗೆ ಪ್ರವೇಶಿಸುವಾಗ ಭ್ರಷ್ಟಾಚಾರ ಆಂದೋಲನದ ಸದಸ್ಯರು ಎಂದು ಸಮಾಜ ವಿರೋಧಿಗಳು ಭಯಪಟ್ಟು ಸನ್ಮಾರ್ಗದಲ್ಲಿ ನಡೆಯುವಂತೆ ಭಗವಾನ್ ಶ್ರೀಕೃಷ್ಣ ಅರಿವು ಕೊಡಲಿ ಎಂದು ನಾವೆಲ್ಲರೂ ಹಾರೈಸೋಣ. ಇದು ನಮ್ಮ ಸಮಾಜದ ದಿಟ್ಟ ಮೊದಲ ಹೆಜ್ಜೆ.
–ಮಧುಸೂದನ್ ಆಯರ್, ಮಾಜಿ ಅಧ್ಯಕ್ಷರು, ಯಾದವ ಸಭಾ ಕೇಂದ್ರ ಸಮಿತಿ ಮಂಗಳೂರು.