ಕಲ್ಮಕಾರು ಪ್ರಕೃತಿ ವಿಕೋಪ : 9 ಕುಟುಂಬಕ್ಕೆ ಇನ್ನೂ ಸಿಗದ ನಿವೇಶನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ನಿವೇಶನ ಕೊಡಿಸಲು ಇನ್ನೆಷ್ಟು ವರ್ಷ ಬೇಕು ; ಎಸ್ಸಿ/ಎಸ್.ಟಿ. ಕುಂದು ಕೊರತೆ ಸಭೆಯಲ್ಲಿ ಚರ್ಚೆ

 

ಕಲ್ಮಕಾರು ಗ್ರಾಮದ ಗುಳಿಕಾನದಲ್ಲಿ ಪ್ರಕೃತಿ ವಿಕೋಪದಿಂದ ಗುಡ್ಡ ಕುಸಿತದಿಂದ ಅಪಾಯದಲ್ಲಿರುವ 9 ಕುಟುಂಬಗಳಿಗೆ ಕಂದಾಯ ಇಲಾಖೆ ಇನ್ನೂ ನಿವೇಶನ ನೀಡದಿರುವ ಕುರಿತು ಎಸ್ಸಿ ಎಸ್ಟಿ ಕುಂದು ಕೊರತೆ ಸಭೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ.ಸಭೆಯು ತಹಶೀಲ್ದಾರ್ ಅನಿತಾಲಕ್ಷ್ಮಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ತಾ.ಪಂ. ಇ.ಒ. ಭವಾನಿಶಂಕರ್, ಸಮಾಜ ಕಲ್ಯಾಣ ಅಧಿಕಾರಿ ಹೇಮಚಂದ್ರ, ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು ಪಾಲನಾ ವರದಿಯ ಮೇಲೆ ಚರ್ಚೆಯಾದಾಗ ಕಲ್ಮಕಾರು ಗುಳಿಕಾನದಲ್ಲಿ ಪ್ರಕೃತಿ ವಿಕೋಪದಿಂದ ಅಪಾಯದಲ್ಲಿರುವ 9 ಕುಟುಂಬಕ್ಕೆ ನೀಡಲು ಗುರುತಿಸಿರುವ ಜಾಗ ಅರಣ್ಯ ಪ್ರದೇಶದಲ್ಲಿ ಬರುತ್ತದೆಯಾದರೆ ಬದಲಿ ಪರಿಹಾರ ಏನು ? ಎಂದು ವಸಂತ ಕುದ್ಪಾಜೆ ಪ್ರಶ್ನಿಸಿದರು.

ಈಗ ಇನ್ನೊಂದು ಕಡೆ ಬದಲಿ ಜಾಗ ಗುರುತಿಸಲಾಗಿದೆ. ಅದನ್ನು ಸಹಾಯಕ ಆಯಕ್ತರಿಗೆ ವರದಿ ಮಾಡಲಾಗಿದೆ ಎಂದು ತಹಶೀಲ್ದಾರ್ ಹೇಳಿದರು. ಎರಡು ವರ್ಷದಿಂದ ಜಾಗ ನೀಡಿಲ್ಲವೆಂದಾದರೆ ಇಲಾಖೆ ಏನು ಮಾಡುತ್ತಿದೆ ಎಂದು ವಸಂತ ಕುದ್ಪಾಜೆ ಇತರರು ಆಕ್ರೋಶ ವ್ಯಕ್ತಪಡಿಸಿದರು. ಈ ಬಾರಿ ನಿವೇಶನ ನೀಡುವ ಕೆಲಸಗಳು ಆಗುತ್ತಿದೆ ಎಂದು ತಹಶೀಲ್ದಾರ್ ಹೇಳಿದರು.

ಅಂಬೇಡ್ಕರ್ ಪ್ರತಿಮೆ ಎಲ್ಲಿ?

ಸುಳ್ಯದಲ್ಲಿ ಅಂಬೇಡ್ಕರ್ ಪ್ರತಿಮೆ ಆಗಬೇಕೆಂದು 2015 ರಿಂದಲೇ ಒತ್ತಾಯಿಸುತ್ತಿದ್ದೇವೆ ಎಂದು ಆನಂದ ಬೆಳ್ಳಾರೆ ಹೇಳಿ, ತಹಶೀಲ್ದಾರ್ ಕುಂಞಿ ಅಹ್ಮದ್ ರವರು ಇರುವಾಗ ತಾಲೂಕು ಕಚೇರಿ ಎದುರು ಅಂಬೇಡ್ಕರ್ ಪ್ರತಿಮೆ ನಿರ್ಮಾಣದ ಭರವಸೆ ನೀಡಿದ್ದರು ಎಂದು ಹೇಳಿದರು. ಈ ಕುರಿತು ನ.ಪಂ. ಸಭೆಯಲ್ಲಿ ಚರ್ಚೆ ನಡೆಸುವುದಾಗಿ ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ‌ ಹೇಳಿದರು.
ಮುಂದಿನ ಸಭೆಯ ವೇಳೆಗೆ ಈ ಕುರಿತು ರೂಪುರೇಷೆ ತಯಾರಿಸುವಂತೆ ತಹಶೀಲ್ದಾರ್ ಅನಿತಾಲಕ್ಷ್ಮಿ ಮುಖ್ಯಾಧಿಕಾರಿ ಗಳಿಗೆ ಸೂಚನೆ ನೀಡಿದರು.

ಅಸ್ಪೃಶ್ಯತೆ ಜೀವಂತ: ಗುತ್ತಿಗಾರಿನಲ್ಲಿ ಆಶಾ ಕಾರ್ಯಕರ್ತೆ ಯರೊಬ್ಬರ ಕುರಿತು ಆರೋಗ್ಯಾಧಿಕಾರಿ ನೀಡಿರುವ ವರದಿಯ ಕುರಿತು ಸಭೆಯಲ್ಲಿ ಅಚ್ಚುತ ಮಲ್ಕಜೆ ಪ್ರಸ್ತಾಪಿಸಿದರು. ಅವರು ದಲಿತ ಎಂಬ ಕಾರಣಕ್ಕೆ ಆಶಾ ಕಾರ್ಯಕರ್ತೆಯಾಗಿ ಮುಂದುವರಿಯಲು ಅವಕಾಶ ನಿರಾಕರಿಸಲಾಗುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿ ಅಸ್ಪೃಶ್ಯತೆ ಈಗಲೂ ಜೀವಂತ ಇದೆ ಎಂದು ಆನಂದ ಬೆಳ್ಳಾರೆ ಹೇಳಿದರು. ಆ ಆಶಾ ಕಾರ್ಯಕರ್ತೆ ಕೆಲವರ ಮನೆಗೆ ಹೋದರೆ ಮಗುವನ್ನು ಹೊರಗೇ ತಂದು ತೋರಿಸುತ್ತಾ ರಂತೆ ಇತ್ಯಾದಿ ದೂರುಗಳು ಇವೆ ಎಂದು ಅಚ್ಚುತ‌ ಮಲ್ಕಜೆ ಹೇಳಿದರು. “ಅಸ್ಪೃಶ್ಯತೆ ಇನ್ನೂ ಇದೆಯಾ? ಹಾಗಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಹಶೀಲ್ದಾರ್ ಹೇಳಿ, ಸಭೆಯಲ್ಲಿದ್ದ ತಾಲೂಕು ವೈದ್ಯಾಧಿಕಾರಿಯನ್ನು ವಿಚಾರಿಸಿದರು. “ಅವರು ದೀರ್ಘ ರಜೆ ಹಾಕಿರುವುದರಿಂದ ವರದಿ ನೀಡಲಾಗಿದೆ. ಈಗ ಅವರು ಬೇರೆ ಕೆಲಸಕ್ಕೂ ಹೋಗುತ್ತಿದ್ದಾರೆ. ಈ ಕುರಿತು ಸಭೆ ನಡೆಸುತ್ತೇವೆ” ಎಂದು ಡಾ.ನಂದಕುಮಾರ್ ಹೇಳಿದರು. ಈ ಕುರಿತು ಸಭೆ ಕರೆದು ಸಮಸ್ಯೆ ಇತ್ಯರ್ಥ ಪಡಿಸಿ ಎಂದು ಇ.ಒ. ಭವಾನಿಶಂಕರ್ ಸಲಹೆ ನೀಡಿದರು.


ನಂದರಾಜ ಸಂಕೇಶ್ ಅಹವಾಲು ವ್ಯಕ್ತಪಡಿಸಿ ಈಗ ಭೂಪರಿವರ್ತನೆ ಆಗದೆ ಎಸ್.ಟಿ, ಎಸ್ಸಿಯವರಿಗೆ ಮನೆ ಕಟ್ಟಲು ಅನುಮತಿ ಸಿಗುತ್ತಿಲ್ಲ. ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು. ಸುಳ್ಯದ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿನಿ ನಿಲಯಗಳಿಗೆ ಸಿಸಿ ಕ್ಯಾಮರ ಅಳವಡಿಸಬೇಕು. ರಾತ್ರಿ ಗಂಡಸರು ಹೋಗುತ್ತಾರೆಂಬ ದೂರು ಇದೆ ಎಂದು ಅವರು ಸಭೆಯ ಗಮನ ಸೆಳೆದರು.
ಬಾಳುಗೋಡು ಗ್ತಾಮದ ಬೆಟ್ಟುಮಕ್ಕಿಯಲ್ಲಿ 9 ಕುಟುಂಬಗಳು 94 ಸಿಯಲ್ಲಿ ಹಕ್ಕುಪತ್ರಕ್ಕಾಗಿ 7 ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದ್ದರೂ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ ಎಂದು ಅಚ್ಚುತ ಗುತ್ತಿಗಾರು ಹೇಳಿದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.