ಸಂಪಾಜೆ ಗ್ರಾಮ ಪಂಚಾಯತ್ ಕಮ್ಯುನಿಟಿ ಆರೋಗ್ಯ ಕೇಂದ್ರದಲ್ಲಿ ಯೋಗ ಶಿಬಿರ ನಡೆಯಿತು. ಸಂಪಾಜೆ ಗ್ರಾ. ಪಂ. ಸದಸ್ಯ, ಕಲ್ಲುಗುಂಡಿ ಮಹಾವಿಷ್ಣು ಮೂರ್ತಿ ದೇವಸ್ಥಾನ ಸಮಿತಿ ಅಧ್ಯಕ್ಷ ಜಗದೀಶ್ ರೈಯವರು ಶಿಬಿರದ ಉದ್ಘಾಟನೆ ಮಾಡಿ ಶುಭ ಹಾರೈಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಅಧ್ಯಕ್ಷತೆ ವಹಿಸಿದ್ದರು, ಗ್ರಾ.ಪಂ. ಸದಸ್ಯ ಎಸ್. ಕೆ. ಹನೀಫ್, ಮಾಜಿ ಸದಸ್ಯ ಷಣ್ಮುಗ, ಸದಾನಂದ ರೈ, ಅಂಗನವಾಡಿ ಕಾರ್ಯಕರ್ತೆ ಧರ್ಮಕಲಾ, ಆಶಾ ಕಾರ್ಯಕರ್ತೆಯರಾದ ಸವಿತಾ ರೈ, ಪ್ರೇಮಲತಾ, ಭಾಗವಹಿಸಿದರು, ಕಮ್ಯುನಿಟಿ ಹೆಲ್ತ್ ಆಫೀಸರ್ ಚೈತ್ರಾ ಸ್ವಾಗತಿಸಿ, ಯೋಗದ ಬಗ್ಗೆ ಮಾಹಿತಿಯನ್ನು ನೀಡಿದರು. ಊರವರು, ಸಾರ್ವಜನಿಕರು, ಮಕ್ಕಳು ಉಪಸ್ಥಿತರಿದ್ದರು.