ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಅಮರೇಶ್ವರ ಕ್ಯಾಂಪ್ ನ ಮೀನು ಕೃಷಿಕರೊಂದಿಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರರವರು ಮೀನು ಉತ್ಪಾದನೆ ಮತ್ತು ಮಾರುಕಟ್ಟೆ ಬಗ್ಗೆ ಚರ್ಚೆ ನಡೆಸಿದರು.
ಮಾನ್ವಿ ಮತ್ತು ಸಿರವಾರ ತಾಲ್ಲೂಕಿನ ರೈತರನ್ನೊಳಗೊಂಡಂತೆ ನೋಂದಣಿಯಾಗಿರುವ ಮೀನು ಉತ್ಪಾದಕರ ಸಂಸ್ಥೆ ವತಿಯಿಂದ ಮೀನು ಉತ್ಪಾದನೆ ಹೆಚ್ಚಿಸುವ ಜೊತೆಗೆ ಮೀನು ಮಾರಾಟ ಹೆಚ್ಚಿಸುವ ಕುರಿತಾಗಿಯೂ ಮತ್ತು ಸ್ಥಳೀಯವಾಗಿ ಮೀನು ಮಾರಾಟದ ಜೊತೆಗೆ ಮೀನಿನಿ ಮೌಲ್ಯ ಹೆಚ್ಚಿಸುವ ಕಡೆಗೆ ಗಮನಹರಿಸಲು ಸೂಚಿಸಿದರು, ಸ್ಥಳೀಯವಾಗಿ ಆಹಾರ ಉತ್ಪಾದನಾ ಘಟಕ ಮತ್ತು ಶೀಥಲಗೃಹ ಸ್ಥಾಪನೆ ಕುರಿತಾಗಿಯೂ ಕ್ರಮ ವಹಿಸಲು ಸೂಚಿಸಿದರು.
ಮೀನುಕೃಷಿಕರು ವಿದ್ಯುತ್ ಸರಬರಾಜು ಸಮಯ ಹೆಚ್ಚಿಸಲು ಮತ್ತು ಮೀನುಕೃಷಿಗೆ ವಿದ್ಯುತ್ ದರದಲ್ಲಿ ಸಹಾಯಧನ ನೀಡಲು ಮಾನ್ಯ ಸಚಿವರನ್ನು ಕೋರಿದರು ಹಾಗೂ ಮೀನು ಕೃಷಿಕರಿಗೂ ಬಲೆ ಮತ್ತು ಹರಿಗೋಲು ಸಹಾಯಧನ ನೀಡಲು ಕೋರಿದರು. ಈ ಸಂದರ್ಭದಲ್ಲಿ ಶ್ರೀ ನಿತಿನ್ ಕುಮಾರ್,ಅಧ್ಯಕ್ಷರು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ, ಎಂ.ಎಲ್.ದೊಡ್ಡಮನಿ ಅಪರ ನಿರ್ದೇಶಕರು (ಕರಾವಳಿ), ದಿನೇಶ ಕುಮಾರ್ ಕಳ್ಳೆರ್ ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ, ಮಲ್ಲಿಕಾರ್ಜುನ, ಮೀನುಗಾರಿಕೆ ಸಚಿವರ ವಿಶೇಷಾಧಿಕಾರಿಗಳು, ಶರಣಬಸವ, ಮೀನುಗಾರಿಕೆ ಉಪನಿರ್ದೇಶಕರು, ರಾಯಚೂರು ಮತ್ತು ಸಾಯಿ ಕ್ಯಾಂಪ್ ನ ರಾಮಾರಾವ್, ಅಮರೇಶ್ವರ ಕ್ಯಾಂಪ್ ನ ರಾಘವಯ್ಯ, ಸೂರ್ಯನಾರಾಯಣ, ಚಂದ್ರಶೇಖರ್, ಭಾಸ್ಕರರಾವ್, ಲೋಕೇಶ್ ಮತ್ತಿತರರು ಹಾಜರಿದ್ದರು.