ಪ್ರತಿಯೊಬ್ಬ ನಾಗರಿಕರು ತಮ್ಮ ಆರೋಗ್ಯ ಸುರಕ್ಷತೆಗಾಗಿ ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡಗಳನ್ನು ಪಡೆದುಕೊಳ್ಳಬೇಕೆಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವರಾದ ಎಸ್.ಅಂಗಾರ ರವರು ಶಿರಗುಪ್ಪ ತಾಲೂಕಿನ ಆರೋಗ್ಯ ಮೇಳ ಉದ್ಘಾಟಿಸಿ ಜನತೆಗೆ ಮನವಿ ಮಾಡಿದರು.
ಜಿಲ್ಲಾಡಳಿತ-ಜಿಲ್ಲಾ ಪಂಚಾಯತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ ಇವರ ಅಡಿಯಲ್ಲಿ ದೇಶದ 75 ನೇ ಸ್ವಾತಂತ್ರ್ಯದ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದ ಅಡಿಯಲ್ಲಿ ದೇಶಾದ್ಯಾಂತ ಇಂದಿನಿಂದ ಆರಂಭಗೊಂಡ ತಾಲೂಕ ಮಟ್ಟದ ಆರೋಗ್ಯ ಮೇಳವನ್ನು ಸಿರುಗುಪ್ಪದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಭಾರತ ಭಾವನೆಗಳ ದೇಶ ಇಲ್ಲಿ ಎಷ್ಟೇ ತಡವಾದರೂ ಕೇಳುವ ತಾಳ್ಮೇ ಜನತೆಗೆ ಇದೆ. ಇಂತ ವಿಭಿನ್ನ ಕಾರ್ಯಕ್ರಮದಲ್ಲಿ ತಜ್ಞವೈದ್ಯರು ಆಗಮಿಸಿ ಸ್ಥಳದಲ್ಲಿಯೇ ತಪಾಸಣೆ ಪರೀಕ್ಷೆ, ಉಚಿತ ಔಷಧೋಪಚಾರ ಕೈಗೊಂಡಿರುವುದು ಶ್ಲಾಘನೀಯ,
ಪ್ರತಿದಿನ 500 ಹೆಚ್ಚು ಹೊರರೋಗಿಗಳಾಗಿ ಅಗಮಿಸುವ ಈ ಆಸ್ಪತ್ರೆಯ ಸೇವಾ ಮನೋಭಾವ ಹೀಗೆ ಮುಂದುವರೆಯಲಿ ಎಂದು ಹಾರೈಸುತ್ತೆನೆ ಎಂದು ತಿಳಿಸಿದರು.
ಕಾರ್ಡ ವಿತರಣೆ.: ಇದೆ ಸಂದರ್ಭದಲ್ಲಿ ಸಾಂಕೇತಿಕವಾಗಿ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕದ ಹಾಗುಯ ಡಿಜಿಟಲ್ ಆರೋಗ್ಯ ಕಾರ್ಡ್ಗಳನ್ನು ಫಲಾನುಭವಿಗಳಿಗೆ ವಿತರಿಸಿದರು.
ವಸ್ತು ಪ್ರದರ್ಶನ ಮಳಿಗೆಗಳಿಗೆ ಬೇಟಿ:
ಆರೋಗ್ಯ ಇಲಾಖೆಯ ಮಾಹಿತಿ ಶಿಕ್ಷಣ ಸಂವಹನ ವಿಭಾಗ ಹಮ್ಮಿಕೊಂಡ ಆರೋಗ್ಯ ಜಾಗೃತಿ ವಸ್ತು ಪ್ರದರ್ಶನ ಆಯುಷ್ ಇಲಾಖೆ ವಸ್ತುಪ್ರದರ್ಶನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪೌಷ್ಟಿಕ ಆಹಾರ ಪ್ರಾತ್ಯಕ್ಷೀತೆ ಮಳಗೆಗಳನ್ನು ಚಾಲನೆಗೊಳಿಸಿ ವಿಕ್ಷಿಸಿದರು.
ಮೇಳದಲ್ಲಿ ಯೋಗ ಮತ್ತು ಧ್ಯಾನ, ರಕ್ತದಾನ, ತಜ್ಞರ ಪರೀಕ್ಷಾ ವಿಭಾಗಗಳಿಗೆ ಬೇಟಿ ನೀಡಿದರು.
ಮೇಳದಲ್ಲಿ ಒಟ್ಟು 1117 ಜನ ಪರೀಕ್ಷೆಗೆ ಒಳಗಾದರು, ಇವರಲ್ಲಿ 281 ಜನರಿಗೆ ಎಬಿಆರ್ಕೆ ಕಾರ್ಡ, 151 ಜನರಿಗೆ ಡಿಜಿಟಲ್ ಆರೋಗ್ಯ ಕಾರ್ಡ್, ಮಾಡಿಕೊಡಲಾಯಿತು. 21 ಟೆಲಿ ಕನ್ಸ್ಲ್ಟನ್ಸಿ, 95 ನೇತ್ರ ತೊಂದರೆ ಇರುವವರಿಗೆ ಕನ್ನಡಕ ವಿತರಿಸಲಾಯಿತು. ಶ್ರೀ ಕರಡಿ ಸಂಗಣ್ಣ, ಮಾನ್ಯ ಸಂಸದರು ಕೊಪ್ಪಳ ಲೋಕಸಭಾ ಕ್ಷೇತ್ರ, ಘನ ಉಪಸ್ಥಿತಿ ವಹಿಸಿದ್ದರು. ಶ್ರೀಮತಿ ಸುಶೀಲಮ್ಮ ವೇಂಕಟರಾಮರೆಡ್ಡಿ,ಅತಿಥಿಗಳಾಗಿ ಭಾಗವಹಿಸದ್ದರು. ಎಮ್ ಎಸ್ ಸೋಮಲಿಂಗಪ್ಪ ಆಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಹೆಚ್ ಎಲ್ ಜನಾರ್ಧನ್ ಪ್ರಾಸ್ಥಾವಿಕವಾಗಿ ಮಾತನಾಡಿದರು.
ವೇದಿಕೆ ಮೇಲೆ ಮಂಜುನಾಥ ಸ್ವಾಮಿ ತಹಶಿಲ್ದಾರರು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು, ತಾಲೂಕಾ ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.