ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಬೇಸಿಗೆ ಶಿಬಿರವು ಏ. 18ರಂದು ಆರಂಭವಾಯಿತು. ಆಡಳಿತ ಮಂಡಳಿಯ ಸಂಚಾಲಕರಾದ ಡಾ. ರೇಣುಕಾ ಪ್ರಸಾದ್ ಹಾಗೂ ಶ್ರೀಮತಿ ಜ್ಯೋತಿ ಪ್ರಸಾದ್ ರವರ ಶುಭ ಆಶೀರ್ವಾದದೊಂದಿಗೆ, ಕೆವಿಜಿ ಅಮರಜ್ಯೋತಿ ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ಡಾ. ಯಶೋಧ ರಾಮಚಂದ್ರ ಇವರ ಅಧ್ಯಕ್ಷತೆಯಲ್ಲಿ ದೀಪ ಬೆಳಗಿಸುವ ಮೂಲಕ ಬೇಸಿಗೆ ಶಿಬಿರವನ್ನು ಉದ್ಘಾಾಟಿಸಲಾಯಿತು.
ವೇದಿಕೆಯಲ್ಲಿ ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಅರುಣ್ ಕುಮಾರ್, ಉಪ ಪ್ರಾಂಶುಪಾಲರಾದ ಶಿಲ್ಪ ಬಿದ್ದಪ್ಪ, ಯೋಗ ಗುರುಗಳು, ಶಿಕ್ಷಕರು, ದೈಹಿಕ ಶಿಕ್ಷಕರು ಹಾಗೂ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.
ಶಿಬಿರದಲ್ಲಿ ಈಜು ತರಬೇತಿ, ಯೋಗ, ಚಿತ್ರಕಲೆ, ಕರಕುಶಲ, ಮುಖವರ್ಣಿಕೆ, ನಟನಾ ಕೌಶಲ್ಯ ಕ್ರೀಡಾ ಚಟುವಟಿಕೆ, ಮೋಜಿನ ಚಟುವಟಿಕೆಗಳನ್ನು ನುರಿತ ತರಬೇತುದಾರರಿಂದ ಮಾರ್ಗದರ್ಶನ ನೀಡಲಾಗುವುದು.