ಅಕ್ರಮ ದನ ಸಾಗಾಟದ ಆರೋಪ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪಿಕಪ್ ಗೆ ತಡೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

*

*ಪೊಲೀಸ್ ಠಾಣೆಯಲ್ಲಿ ಮಾತುಕತೆ: ಗೋವುಗಳು ವಾಪಸು ತಂದವರ ಮನೆಗೆ*

ಹರಿಹರ ಪಲ್ಲತ್ತಡ್ಕ ಭಾಗದ ಮುಖಂಡರೊಬ್ಬರು ರಾತ್ರಿ ಎರಡು ದನಗಳನ್ನು ಪಿಕಪ್ ನಲ್ಲಿ ಸಾಗಿಸುತ್ತಿದ್ದ ವೇಳೆ ಅಕ್ರಮ ದನ ಸಾಗಾಟ ಆರೋಪದಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅದನ್ನು ತಡೆದು ತಂದವರ ಮನೆಗೆ ವಾಪಾಸ್ ಕಳುಹಿಸಿದ ಘಟನೆ ನಿನ್ನೆ ನಡೆದಿದೆ.

ಹರಿಹರದ ಪಲ್ಲತ್ತಡ್ಕದ ವ್ಯಕ್ತಿಯೋರ್ವರು ಪಿಕಪೊಂದರಲ್ಲಿ ಎರಡು ಗೋವುಗಳನ್ನು ಕೊಂಡೊಯ್ಯುತಿದ್ದರೆನ್ನಲಾಗಿದೆ.. ಇದನ್ನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಂಘಟನೆಯೊಂದರ ಸದಸ್ಯರು ನಿಲ್ಲಿಸಿ ಪ್ರಶ್ನಿಸಿದ್ದು, ದನ ಸಾಗಿಸುವ ಲೈಸನ್ಸ್ ಕೇಳಿದರೆನ್ನಲಾಗಿದೆ. ಅಲ್ಲದೆ ಅಕ್ರಮ ಸಾಗಾಟದ ಆರೋಪ ಹೊರಿಸಿ, ಲೈಸೆನ್ಸ್ ಹೊಂದಿಲ್ಲದ ಕಾರಣ ಆಕ್ಷೇಪ ವ್ಯಕ್ತಪಡಿಸಿದರೆಂದೂ, ಈ ಸಂದರ್ಭ ಇತ್ತಂಡಗಳ ಮಧ್ಯೆ ಮಾತಿನ ಚಕಮಕಿ ನಡೆಯಿತೆಂದೂ ತಿಳಿದುಬಂದಿದೆ. ದನಗಳನ್ನು ಸಂಬಂಧಿಕರ ಮನೆಗೆ ಕೊಂಡೊಯ್ಯುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಆದರೆ ತಡೆದವರು ಇದನ್ನು ಒಪ್ಪಲು ಸಿದ್ಧವಾಗಲಿಲ್ಲ. ಪ್ರಕರಣ ಸುಬ್ರಹ್ಮಣ್ಯ ಠಾಣೆಗೆ ಮುಟ್ಟಿತು. ಅಲ್ಲಿ ಮಾತುಕತೆ ನಡೆದಿದ್ದು, ಈ ವೇಳೆ ಕೆಲ ಬಿಜೆಪಿ ಮುಖಂಡರೂ ಅಲ್ಲಿಗೆ ಬಂದರೆನ್ನಲಾಗಿದೆ. ಮಾತುಕತೆ ಬಳಿಕ ಗೋವುಗಳನ್ನು ವಾಪಸು ತಂದವರ ಮನೆಗೆ ಕಳುಹಿಸಲಾಯಿತು ಎಂದು ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.