ಏ. 2 ರಂದು ನಿಧನರಾದ ಗುತ್ತಿಗಾರು ಗ್ರಾಮದ ಬಳ್ಳಕ್ಕ ನಿವಾಸಿ ಮೊಗ್ರ ಮೇಲೆಮನೆ ಪೇರಪ್ಪ ಗೌಡರಿಗೆ ಶ್ರದ್ಧಾಂಜಲಿ ಸಭೆಯು ಏ. 18ರಂದು ಮೃತರ ಸ್ವಗೃಹ ಬಳ್ಳಕ್ಕದಲ್ಲಿ ನಡೆಯಿತು. ದಿವೀಶ್ ಮುರುಳ್ಯ ಮತ್ತು ಎ.ಕೆ. ಹಿಮಕರ್ ಮೃತರಿಗೆ ನುಡಿನಮನ ಸಲ್ಲಿಸಿದರು.
ಮೃತರ ಪುತ್ರರಾದ ಉದ್ಯಮಿ ಜನಾರ್ಧನ ಗೌಡ, ವಿಶ್ವನಾಥ ಗೌಡ, ಸುದ್ದಿ ಏಜೆಂಟ್ ಸುಭಾಶ್ ಬಳ್ಳಕ್ಕ, ಪುತ್ರಿ ಶ್ರೀಮತಿ ಉಮಾವತಿ, ಸಹೋದರಿ ಶ್ರೀಮತಿ ಹೊನ್ನಮ್ಮ ದೇಲಂಪಾಡಿ ಸೇರಿದಂತೆ ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಸಭೆಯಲ್ಲಿ ಭಾಗವಹಿಸಿ ಪುಷ್ಪ ನಮನ ಸಲ್ಲಿಸಿದರು.