ಬೆಳ್ಳಾರೆಯ ಎಸ್ ವೈ ಎಸ್ ಹಾಗೂ ಎಸ್ ಎಸ್ ಎಫ್ ವತಿಯಿಂದ ಬೆಳ್ಳಾರೆ ಪರಿಸರದ ಸುಮಾರು ಎಪ್ಪತ್ತು ಬಡ ಹಾಗೂ ನಿರ್ಗತಿಕ ಕುಟುಂಬಗಳಿಗೆ ರಂಝಾನ್ ಕಿಟ್ ಅನ್ನು ಎಪ್ರಿಲ್ 17 ರಂದು ವಿತರಿಸಲಾಯಿತು. ಹಸನ್ ಸಖಾಫಿ ಬೆಳ್ಳಾರೆ ದುವಾಕ್ಕೆ ನೇತೃತ್ವ ವನ್ನು ನೀಡಿದರು.
ಎಸ್ ವೈ ಎಸ್ ಬೆಳ್ಳಾರೆ ಸೆಂಟರ್ ಅಧ್ಯಕ್ಷ ಸತ್ತಾರ್ ಸಖಾಫಿ , ಜಿಲ್ಲಾ ಮುಖಂಡ ಶಂಸುದ್ದೀನ್ ಝಂ ಝಂ , ಬ್ರಾಂಚ್ ಉಪಾಧ್ಯಕ್ಷ ಮಹಮೂದ್ ಬಿ ಎ , ಹಮೀದ್ ಅಲ್ಫಾ , ಬೆಳ್ಳಾರೆ ಎಸ್ ಎಸ್ ಎಫ್ ಶಾಖಾಧ್ಯಕ್ಷ ಶಾಕಿರ್ , ಜಿಲ್ಲಾ ಸದಸ್ಯ ಕಲಾಂ ಝುಹ್ರಿ , ಸೆಕ್ಟರ್ ಕಾರ್ಯ ದರ್ಶಿ ನೌಶಾದ್ ಅಹ್ಸನಿ , ಮಕ್ಬೂಲ್ , ಅನೀಸ್ , ರಫೀಕ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು .ಕಾರ್ಯ ಮದಲ್ಲಿ ಹನೀಫ್ ಬೆಳ್ಳಾರೆ ಸ್ವಾಗತಿಸಿ ವಂದಿಸಿದರು.