ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಪರೀಕ್ಷಾ ಬೋರ್ಡ್ ನಡೆಸಿದ ಮದರಸ ಪಬ್ಲಿಕ್ ಪರೀಕ್ಷೆ ಯಲ್ಲಿ ಆರಂತೋಡು ನುಸ್ರತುಲ್ ಇಸ್ಲಾಂ ಮದರಸ ಕ್ಕೆ ಶೇಕಡ 100ಫಲಿತಾಂಶ ಬಂದಿದೆ.
ಪರೀಕ್ಷೆ ಬರೆದ ಐದನೇ ತರಗತಿ ಯ ವಿದ್ಯಾರ್ಥಿ ಆರಂತೋಡು ಮಸೀದಿ ಖತೀಬರಾದ ಇಸಾಕ್ ಬಾಖವಿ ಯವರ ಪುತ್ರ ಮುಝಮ್ಮಿಲ್ ಸುಳ್ಯ ರೇಂಜ್ ಮಟ್ಟದಲ್ಲಿ ತಾಲೂಕಿನಲ್ಲಿಯೇ ಪ್ರಥಮ ಸ್ಥಾನಿಯಾಗಿರುತ್ತಾರೆ. ಅರಂತೋಡಿನ ಅಬೂಬಕ್ಕರ್ ಸಿದ್ದಿಕ್ ರವರ ಪುತ್ರಿ 7ನೇ ತರಗತಿ ವಿದ್ಯಾರ್ಥಿನಿ ಆಯಿಷತ್ ಸಿಮ್ರಾ ಮದರಸ ದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯಾಗಿದ್ದಾರೆ