ಕೊಲ್ಲಮೊಗ್ರು ಹರಿಹರ ಸಿ.ಎ ಬ್ಯಾಂಕ್ ನ ಅಧ್ಯಕ್ಷ, ಕಳೆದ ೨೦ ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿದ್ದ, ಜೆಡಿಎಸ್ ನ ತಾಲೂಕು ಮಾಜಿ ಸಂಘಟನಾ ಕಾರ್ಯದರ್ಶಿ ವಿನೂಪ್ ಮಲ್ಲಾರರವರು ಎ.೧೮ ರಂದು ಹಾಲೆಮಜಲಿನ ಶ್ರೀ ವೆಂಕಟೇಶ್ವರ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.
ಗುತ್ತಿಗಾರು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಕರ್ನಾಟಕ ಸರಕಾರದ ವಿಧಾನಪರಿಷತ್ ಸದಸ್ಯರುಗಳಾದ ಹರೀಶ್ ಕುಮಾರ್ ಹಾಗೂ ಮಂಜುನಾಥ ಭಂಡಾರಿಯವರು ಭೇಟಿ ನೀಡಿದ್ದ ಸಂದರ್ಭ ಪಕ್ಷದ ಧ್ವಜ ನೀಡಿ ಸ್ವಾಗತಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ ಜಯರಾಮ, ಕೃಷ್ಣಪ್ಪ ಕಡಬ, ಡಾ.ರಘು, ದಿನೇಶ್ ಅಂಬೆಕಲ್ಲು, ಹರ್ಷಕುಮಾರ್ ದೇವಜನ, ಮಣಿಕಂಠ ಕೊಳಗೆ, ಶೈಲೇಶ್ ಕೂಜುಗೋಡು ಕಟ್ಟೆಮನೆ, ಶಶಿಕಲಾ ದೇರಪಜ್ಜನಮನೆ ಮತ್ತಿತರರು ಉಪಸ್ಥಿತರಿದ್ದರು.