ಜಿಲ್ಲಾಧಿಕಾರಿಗಳು ಬಂದು ತೆಗೆಯಬೇಕೆಂದು ಹೇಳಿದ ಕಟ್ಟಡದ ಕೆಲಸವೇ ನಿಲ್ಲಿಸಲು ಅಧಿಕಾರಿಗಳಿಂದಾಗಿಲ್ಲ : ಪ್ರಸ್ತಾಪ
ಸುಳ್ಯ ನಗರ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡಗಳು ಕಟ್ಟುತ್ತಿರುವ ಕುರಿತು ದೂರು ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವ ಕುರಿತು ಸಭೆಯಲ್ಲಿ ಚರ್ಚೆ ನಡೆದ ಹಾಗೂ ಇದನ್ನು ನಿಲ್ಲಿಸಲು ಆಗುವುದಿಲ್ಲವಾದರೆ ಎಲ್ಲರಿಗೂ ಪರ್ಮಿಸನ್ ಕೊಡೋಣ ಎಂದು ಸದಸ್ಯರು ಆಕ್ರೋಶವಾಗಿ ನುಡಿದ ಪ್ರಸಂಗವೂ ನ.ಪಂ. ಸಾಮಾನ್ಯ ಸಭೆಯಲ್ಲಿ ನಡೆದಿದೆ.
ಸದಸ್ಯ ಬಾಲಕೃಷ್ಣ ಭಟ್ ರವರು ವಾರ್ಡ್ನಲ್ಲಿ ಅಗತ್ಯವಾಗಿ ಆಗಬೇಕಾದ ಕೆಲಸದ ಕುರಿತು ದೂರು ಕೊಟ್ಟರೂ ಕೆಲಸಗಳಾಗದಿರುವ ಮತ್ತು ಪ್ರತಿಭಟನೆಯ ಎಚ್ಚರಿಕೆಯ ಮಾತನಾಡುತ್ತಿದ್ದಾಗ, ಅಧ್ಯಕ್ಷ ವಿನಯ ಕಂದಡ್ಕರು ಅವರ ಮಾತಿಗೆ ಪೂರಕವಾಗಿ ಮಾತನಾಡಿ, “ಮೇಲಿನ ಅಧಿಕಾರಿಗಳು ಕೆಳಗಿನ ಅಧಿಕಾರಿಗಳಲ್ಲಿ ಕೆಲಸ ಮಾಡಿಸಬೇಕು. ಅವರಿಗೆ ಆಸಕ್ತಿ ಬೇಕಲ್ಲವೇ ಎಂದು ಹೇಳಿ, ನಗರದಲ್ಲಿ ೪೦ ರಿಂದ ೪೫ ರಷ್ಟು ಅಕ್ರಮ ಕಟ್ಟಡಗಳು ಆಗುತ್ತಿದೆ. ಇಲ್ಲಿಂದ ಎಷ್ಟು ಜನಕ್ಕೆ ನೋಟೀಸ್ ಕೊಟ್ಟು ಕ್ರಮ ಜರುಗಿಸಿದ್ದೀರಿ?” ಎಂದು ಪ್ರಶ್ನಿಸಿದರು. “ಕಟ್ಟಡ ಕಟ್ಟಲು ಅನುಮತಿಗಗಿ ಪಂಚಾಯತ್ಗೆ ಬಂದರೆ ಹೋಗಿ ಕಟ್ಟಡ ಕಟ್ಟಿ ಆಮೇಲೆ ನೋಡೋಣ” ಎಂದು ಮುಖ್ಯಾಧಿಕಾರಿಗಳೇ ಹೇಳಿರುವ ಮಾಹಿತಿ ಇದೆ ಎಂದು ಶರೀಫ್ ಕಂಠಿ ಹೇಳಿದರು. “ಇಲ್ಲ ಸಾರ್ ನಾವು ಯಾರಿಗು ಹಾಗೆ ಹೇಳಿಲ್ಲ. ಅಕ್ರಮ ಕಟ್ಟಡದ ದೂರು ಬಂದಾಗ ನಾವು ಅವರಿಗೆ ನೊಟೀಸ್ ಕೊಟ್ಟಿzವೆ” ಎಂದು ಮುಖ್ಯಾಧಿಕಾರಿಗಳು ಹೇಳಿದಾಗ, “ನೊಟೀಸ್ ಕೊಟ್ಟಿದ್ದೀರಿ. ಅದರಲ್ಲಿ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಹೇಳಿದ್ದೀರಿ. ಏನು ಕಾನೂನು ಕ್ರಮ ಮಾಡಿದ್ದೀರಿ ಸಭೆಗೆ ತಿಳಿಸಿ ಎಂದು ಅಧ್ಯಕ್ಷ ವಿನಯರು ಮುಖ್ಯಾಧಿಕಾರಿಗಳಿಗೆ ಹೇಳಿದರು.
ಗಾಂಧಿನಗರದಲ್ಲಿ ರೋಡಲ್ಲೆ ಕಂಪೌಂಡ್ ಕಟ್ಟುತ್ತಿದ್ದಾರೆಂದು ನಾನು ದೂರು ಕೊಟ್ಟಾಗ ನಿಮ್ಮಿಂದ ನಿಲ್ಲಿಸಲು ಆಗಿಲ್ಲ. ಮತ್ತೇನು ನೀವು ಕೆಲಸ ಮಾಡೋದು ಎಂದು ಸದಸ್ಯೆ ಪ್ರವಿತಾ ಪ್ರಶಾಂತ್ ಮುಖ್ಯಾಧಿಕಾರಿಯವರನ್ನು ಪ್ರಶ್ನಿಸಿದರು.
“ನಾವು ಹೋಗಿ ನಿಲ್ಲಿಸಿ ಬಂದಿzವೆ” ಎಂದು ಮುಖ್ಯಾಧಿಕಾರಿ ಹೇಳಿದಾಗ, “ಅಲ್ಲಿ ಕೆಲಸ ಆಗಿದೆ” ಎಂದು ಸದಸ್ಯೆ ಪ್ರವಿತಾ ಹೇಳಿದರು. “ಇವರು ನೋಟೀಸು ಮಾತ್ರ ಕೊಡುತ್ತಾರೆ. ಕ್ರಮ ಜರುಗಿಸುವುದಿಲ್ಲ. ಅಕ್ರಮ ಕಟ್ಟಡಕ್ಕೂ ನಂಬರ್ ಕೊಡುತ್ತಾರೆ ಅದು ನಮ್ಮ ಗಮನಕ್ಕೂ ಬಂದಿದೆ” ಎಂದು ಅಧ್ಯಕ್ಷರು ಹೇಳಿದರು. “ಕಟ್ಟಡ ಕಟ್ಟವಾಗಲೇ ಹೋಗಿ ನಿಲ್ಲಿಸಬೇಕು. ಹೊರತು ಅರ್ಧ ಕಟ್ಟಡ ಆದ ಮೇಲೆ ನೀವು ನಿಲ್ಲಿಸಿದರೆ ಆಗುವುದಿಲ್ಲ” ಎಂದು ಸದಸ್ಯ ಶರೀಫ್ ಕಂಠಿ ಸಲಹೆ ನೀಡಿದರಲ್ಲದೆ, ನಿಮಗೆ ಅಕ್ರಮ ಕಟ್ಟಡ ನಿಲ್ಲಿಸಲಾಗುವುದಿಲ್ಲವಾದರೆ ಎಲ್ಲರಿಗೂ ಕಟ್ಟಲು ಅವಕಾಶ ಕೊಡಿ ಎಂದು ಅವರು ಹೇಳಿದರು. ‘`ಜಿಲ್ಲಾಧಿಕಾರಿಗಳು ಬಂದು ತೆಗೆಯಬೇಕೆಂದು ಹೇಳಿದ ಕಟ್ಟಡದ ಕೆಲಸವೇ ಆಗ್ತ ಇದೆ. ಅದನ್ನೇ ನಿಲ್ಲಿಸಲು ಇವರಿಮದಾಗಿಲ್ಲ. ಅದಕ್ಕಿಂತ ಅಕ್ರಮ ಕಟ್ಟಡ ಬೇರೆ ಬೇಕೆ?” ಎಂದು ಸದಸ್ಯ ಉಮ್ಮರ್ ಹೇಳಿದರು. `’ಅಕ್ರಮ ಕಟ್ಟಡ ನಿಲ್ಲಿಸಲು ಸ್ಕ್ವಾಡ್ ಟೀಂ ಮಾಡೋಣ ಸರ್” ಎಂದು ಮುಖ್ಯಾಧಿಕಾರಿಗಳು ಹೇಳಿದಾಗ, “ಅದರಲ್ಲೂ ನೀವೆ ಇರೋದಲ್ವ ಸರ್” ಎಂದು ಸದಸ್ಯರು ಹೇಳಿದರು. “ಅಕ್ರಮ ಕಟ್ಟಡದ ದೂರು ಬಂದಾಗ ಒಂದೆರಡು ಕಡೆ ನಮ್ಮ ಜೆಸಿಬಿಗೆ ಕೆಲಸ ಕೊಡಿ” ಎಂದು ವಿನಯ ಕಂದಡ್ಕರು ಅಧಿಕಾರಿಗಳಿಗೆ ಸೂಚನೆ ನೀಡಿದಾಗ ವಿಪಕ್ಷ ಸದಸ್ಯರ ಸಹಿತ ಎಲ್ಲರೂ ಸಹಮತ ವ್ಯಕ್ತ ಪಡಿಸಿದರು. `’ವಾಣಿಜ್ಯ ಕಟ್ಟಡಗಳನ್ನು ಮೊದಲು ಕೆಡವಿ. ವಾಸದ ಮನೆಯಾದರೂ ಮಾನವೀಯತೆ ಇರಲಿ” ಎಂದು ಸದಸ್ಯ ಉಮ್ಮರ್ ಸಲಹೆ ನೀಡಿದರು.
ನಗರದ ವಾರ್ಡ್ ವ್ಯಾಪಿ
ಸಮುದಾಯ ಆರೋಗ್ಯಾಧಿಕಾರಿ
ಸುಳ್ಯ ನಗರ ವ್ಯಾಪ್ತಿಯ ೨೦ ವಾರ್ಡ್ಗಳಲ್ಲಿ ಕಾರ್ಯ ನಿರ್ವಹಿಸಲು ಆರೋಗ್ಯ ಇಲಾಖೆಯಿಂದ ಸಮುದಾಯ ಆರೋಗ್ಯ ಅಧಿಕಾರಿಗಳ ನೇಮಕವಾಗಿರುವ ಕುರಿತು ಅಧ್ಯಕ್ಷ ವಿನಯ ಕಂದಡ್ಕರು ಮಾಹಿತಿ ನೀಡಿದರು.
೨೦ ವಾರ್ಡ್ಗಳನ್ನು ಎ, ಬಿ, ಸಿ, ಡಿ, ಎಂದು ವಿಂಗಡಿಸಿ ೫ ವಾರ್ಡ್ ಗಳಿಗೆ ಒಬ್ಬರನ್ನು ನೇಮಿಸಲಾಗಿದೆ. ಸಭೆಗೆ ಬಂದಿದ್ದ ಸಮುದಾಯ ಆರೋಗ್ಯ ಅಧಿಕಾರಿಗಳು ತಮ್ಮ ಪರಿಚಯವನ್ನು ಸದಸ್ಯರ ಮುಂದೆ ಹೇಳಿಕೊಂಡರು.
ಕೆ.ಎಫ್.ಡಿ.ಸಿ ಸಹಕರಿಸುತ್ತಿಲ್ಲ
ಸುಳ್ಯ ನಗರ ವ್ಯಾಪ್ತಿ ಕಂದಡ್ಕ ಹಾಗೂ ಸುಳ್ಯದ ಮಿಲಿಟರಿ ಗ್ರೌಂಡ್ ನಲ್ಲಿರುವ ಕೆ.ಎಫ್.ಡಿ.ಸಿ. ನೌಕರರ ಕಾಲೊನಿಗಳಲ್ಲಿ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ನಿಗಮದವರು ಸಹಕಾರ ನೀಡುತ್ತಿಲ್ಲ ಎಂದು ಇಂಜಿನಿಯರ್ ಸಭೆಗೆ ಮಾಹಿತಿ ನೀಡಿದರು. ಕಂದಡ್ಕದಲ್ಲಿ ರಸ್ತೆ ಕಾಂಕ್ರಿಟೀಕರಣ ವೇಳೆ ಕೆ.ಎಫ್.ಡಿ.ಸಿ. ಯವರು ನಮ್ಮ ಜಾಗ ಎಂದು ಆಕ್ಷೇಪ ಮಾಡಿದ್ದಾರೆ. ಬೊರ್ ವೆಲ್ ಕೊರೆಸುವ ಸಂದರ್ಭದಲ್ಲಿಯೂ ಆಕ್ಷೇಪ ಬಂದಿದೆ ಎಂದು ಹೇಳಿದರು. ಅವರ ಮಾತಿಗೆ ಪೂರಕವಾಗಿ ಮಾತನಾಡಿದ ಅಧ್ಯಕ್ಷ ವಿನಯ ಕಂದಡ್ಕರು, ಒಂದೋ ನ.ಪಂ. ನಿಂದ ಕೆಲಸ ಮಾಡುವಾಗ ಕೆ.ಎಫ್.ಡಿ.ಸಿ. ನಿಗಮ ಸಹಕಾರ ನೀಡಬೇಕು. ಇಲ್ಲವೇ ಅವರೇ ಸೌಲಭ್ಯ ಒದಗಿಸಬೇಕು” ಎಂದು ಹೇಳಿದರು. ಈ ಕುರಿತು ನಿಗಮಕ್ಕೆ ಬರೆಯಲು ಸದಸ್ಯರು ಸಲಹೆ ನೀಡಿದರು. ಸಭೆಗೆ ಬಂದಿದ್ದ ಕೆ.ಎಫ್.ಡಿ.ಸಿ. ಅಧಿಕಾರಿ ಈ ಕುರಿತು ಮೇಲಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದರು.
ಮಿಲಿಟರಿ ಗ್ರೌಂಡ್ ಪ್ರದೇಶದಿಂದ ಬೆಳಗ್ಗೆ ಟ್ಯಾಪಿಂಗ್ ಗೆ ಹೋಗುವವರು ರಸ್ತೆಯ ಬದಿ ಕಸ ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಈ ಕುರಿತು ನಿಗಮಕ್ಕೆ ಬರೆಯುವಂತೆ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು.
ಕೆಲಸ ಆಗದಿದ್ದರೆ ಸಾಮೂಹಿಕ ಪ್ರತಿಭಟನೆ
ಈ ಸಭೆಗೆ ಮೆಸ್ಕಾಂ, ಅರಣ್ಯ, ಸಾರಿಗೆ ಪೋಲೀಸ್ ಇಲಾಖೆಯವರನ್ನು ಕರೆಯಬೇಕೆಂದು ಕೇಳಿದ್ದೆವು. ಸುಳ್ಯದ ಪಾರ್ಕಿಂಗ್ ಸಮಸ್ಯೆಮ ಮ್ಯಾನ್ಹೋಲ್ ಸಮಸ್ಯೆ ಇತ್ಯಾದಿ ವಿಚಾರಗಳ ಕುರಿತು ಚರ್ಚಿಸಬೇಕು. ಅವರನ್ನು ಯಾಕೆ ಕರೆದಿಲ್ಲ ಮುಖ್ಯಾಧಿಕಾರಿಗಳೇ ಎಂದು ವೆಖಪ್ಪ ಗೌಡರು ಪ್ರಶ್ನಿಸಿದರು. “ಎಲ್ಲರಿಗೂ ನೋಟೀಸ್ ಮಾಡಿzವೆ” ಎಂದು ಮುಖ್ಯಾಧಿಕಾರಿ ಉತ್ತರಿಸಿದಾಗ, “ನೊಟೀಸ್ ಮಾಡೋದಲ್ಲ. ಅವರನ್ನು ಬರುವ ಹಾಗೆ ಮಾಡಬೇಕು. ನೀವು ಜಡತ್ವ ಬಿಟ್ಟು ಕೆಲಸ ಮಾಡಿ” ಎಂದು ವೆಂಕಪ್ಪ ಗೌಡರು ಹೇಳಿದರು. `’ಇಲ್ಲಿ ನಿರ್ಣಯಗಳು ಅನುಷ್ಠಾನ ಆಗುತ್ತಿಲ್ಲ. ಒಳಚರಂಡಿ ವ್ಯವಸ್ಥೆ ಕುರಿತು ಥರ್ಡ್ ಪಾರ್ಟಿ ಇನ್ಸ್ ಸ್ಪೆಕ್ಷನ್ ಮಾಡಬೇಕೆಂದು ಹೇಳಿzವೆ ಏನಾಗಿದೆ?” ಎಂದು ಅಧ್ಯಕ್ಷರು ಸಭೆಯಲ್ಲಿ ಕೇಳಿದರು. “ನ.ಪಂ. ಅಧ್ಯಕ್ಷರು, ಸದಸ್ಯರು ಎಷ್ಟೆ ಆಕ್ಟಿವ್ ಆದ್ರೂ ಅಧಿಕಾರಿಗಳ ಸಪೋರ್ಟ್ ಸಿಗ್ತಾ ಇಲ್ಲ. ಮುಖ್ಯಾಧಿಕಾರಿಗಳೆ ನೀವು ಸರಿಯಾಗಿ ಕೆಲಸ ಮಾಡಬೇಕು. ನಿಮ್ಮಿಂದಾಗಿ ಅಧ್ಯಕ್ಷರು ಮಾತು ಕೇಳಿಸಿಕೊಳ್ಳುವ ಸ್ಥಿತಿ ಇದೆ” ಎಂದು ಬೂಡು ರಾಧಾಕೃಷ್ಣ ರೈ ಹೇಳಿದರು. `’ನಾನು ನಮ್ಮ ವಾರ್ಡ್ನ ಸಮಸ್ಯೆಯ ಕುರಿತು ೧ ವರ್ಷದ ಹಿಂದೆ ಮೆಸ್ಕಾಂ ಮತ್ತು ಅರಣ್ಯ ಇಲಾಖೆಗೆ ಪತ್ರ ಬರೆದೆ. ಇನ್ನೂ ಕೆಲಸ ಆಗಿಲ್ಲ. ಈ ಸಭೆಯಲ್ಲಿಯೂ ಹೇಳಿದ್ದೆ ಅಧಿಕಾರಿಗಳ ಸ್ಪಂದನೆ ಇಲ್ಲ. ಇದು ಹೀಗೆ ಮುಂದುವರಿದರೆ ನಾವು ಸಾಮೂಹಿಕ ಪ್ರತಿಭಟನೆ ನಡೆಸುತ್ತೇವೆ ಎಂದು ಸದಸ್ಯ ಬಾಲಕೃಷ್ಣ ಭಟ್ ಮುಖ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಸದಸ್ಯರುಗಳಾದ ರಿಯಾಜ್ ಕಟ್ಟೆಕಾರ್ ಹಾಗೂ ಶರೀಫ್ ಕಂಠಿ ಧ್ವನಿಗೂಡಿಸಿದರು.