ಮುರುಳ್ಯ ಗ್ರಾಮದ ಕುಕ್ಕಟ್ಟೆ ಶ್ರೀ ಕಾಳಿಕಾ ಪರಮೇಶ್ವರಿ ಭದ್ರಕಾಳಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು ಅದ್ಧೂರಿಯಾಗಿ ಬ್ರಹ್ಮಕಲಶೋತ್ಸವ ನಡೆಯಲಿದೆ. ಇದರ ಪೂರ್ವಾಂಗವಾಗಿ ಏಪ್ರಿಲ್ ೧೯ ರಂದು ಮೂಡಬಿದಿರೆ ಕೇಶವ ತಂತ್ರಿಗಳ ನೇತೃತ್ವದಲ್ಲಿ ನೂತನ ಶಿಲಾ ಮೂರ್ತಿಯ ಜಲಾಧಿವಾಸ ಕಾರ್ಯಕ್ರಮ ನಡೆಯಿತು.
ಬಳಿಕ ಆಡಳಿತ ಸಮಿತಿ ಅಧ್ಯಕ್ಷ ರವೀಂದ್ರ ಆಚಾರ್ಯ ರವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆದು ದೇವಳದ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು. ಶೀಘ್ರದಲ್ಲಿ ಜೀರ್ಣೋದ್ಧಾರ ಕಾರ್ಯಕ್ರಮ ನಡೆಯುವುದರಿಂದ ಊರ ಪರವೂರಿನ ಭಕ್ತಾದಿಗಳ ನಿಂದ ಪ್ರತಿದಿನ ಶ್ರಮದಾನ ನಡೆಯಲಿರುವುದು ಹೆಸರು ನೋಂದಾವಣೆಯನ್ನು ಮುಂಚಿತವಾಗಿ ತಿಳಿಸುವುದು, ಧನಸಹಾಯವನ್ನು ಸ್ವೀಕರಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಅನುವಂಶಿಕ ಮೊಕ್ತೇಸರರಾದ ಜನಾರ್ದನ ಆಚಾರ್ಯ ಕುಕ್ಕಟ್ಟೆ, ಆಡಳಿತ ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಪುರೋಹಿತರು ಕಿನ್ನಿಗೋಳಿ ಪ್ರಸ್ತಾವನೆಗೈದು ಸ್ವಾಗತಿಸಿದರು. ಆಡಳಿತ ಸಮಿತಿ ಅಧ್ಯಕ್ಷ ಧನಂಜಯ ಆಚಾರ್ಯ ಏನೆಕಲ್ಲು , ಉಪಾಧ್ಯಕ್ಷರುಗಳಾದ ವಸಂತ ನಡುಬೈಲು, ಕಿಶೋರ್ ಆಚಾರ್ಯ ಉಪ್ಪಿನಂಗಡಿ, ಚಿನ್ನಯ್ಯ ಆಚಾರ್ಯ ನರ್ಲಡ್ಕ, ಸರೋಜಿನಿ ಆಚಾರ್ಯ ಕಡಬ, ಕೃಷ್ಣ ಆಚಾರ್ಯ ವಿಟ್ಲ, ಕುಸುಮಾಧರ ಆಚಾರ್ಯ ಬೆಳ್ಳಾರೆ, ಭಾಸ್ಕರ ಆಚಾರ್ಯ ಸುಬ್ರಹ್ಮಣ್ಯ ಸೀತರಾಮ ಆಚಾರ್ಯ ಪುಳಿಮರಡ್ಕ, ಕೃಷ್ಣಯ್ಯ ಆಚಾರ್ಯ ಇಂದ್ರಾಜೆ, ಸಂಜೀವ ಆಚಾರ್ಯ ಸೋಣಂದೂರು, ಗೌರವ ಸಲಹೆಗಾರರಾದ ಪುತ್ತೂರು ಉಮೇಶ್ ಆಚಾರ್ಯ, ಜನಾರ್ದನ ಆಚಾರ್ಯ ಕಾಣಿಯೂರು, ಕೃಷಿಕ ಪದ್ಮನಾಭ ರೈ ಎಂಜೀರು ಎಣ್ಮೂರು ಭಜನಾ ಮಂದಿರದ ರಘುನಾಥ ರೈ ಕೆ .ಎನ್., ಮುರುಳ್ಯ ಎಣ್ಮೂರು ಸೊಸೆಟಿ ಅಧ್ಯಕ್ಷ ವಸಂತ ಹುದೇರಿ, ನಿರ್ದೇಶಕಿ ಭಾಗೀರಥಿ ಮುರುಳ್ಯ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.