ಅಕಾಡೆಮಿ ಆಫ್ ಲಿಬರಲ್ಎಜ್ಯುಕೇಶನ್ ಇದರ ಆಡಳಿತಕ್ಕೊಳಪಟ್ಟ ಕೆ.ವಿ.ಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ನ ಆಧುನಿಕ ವ್ಯವಸ್ಥೆಗಳನ್ನು ಒಳಗೊಂಡ ನೂತನ ಈಜುಕೊಳದ ಉದ್ಘಾಟನೆ ಎ. ೨೦ರಂದು ನಡೆಯಿತು. ನಟರಾಜ್ ಶರ್ಮ ಕುದ್ಪಾಜೆಯವರ ನೇತೃತ್ವದಲ್ಲಿಗಣಪತಿ ಹವನ ನೆರವೇರಿತು. ನಂತರ ನಡೆದ ಸಮಾರಂಭದಲ್ಲಿಅಕಾಡೆಮಿ ಆಫ್ ಲಿಬರಲ್ಎಜ್ಯುಕೇಶನ್ನ ಪ್ರಧಾನ ಕಾರ್ಯದರ್ಶಿ, ರಾಜ್ಯಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ರೇಣುಕಾ ಪ್ರಸಾದ್ ಕೆ.ವಿ.ಯವರು ಈಜುಕೊಳವನ್ನು ಉದ್ಘಾಟಿಸಿ ಬೆಳೆಯುತ್ತಿರುವ ಕೆ.ವಿ.ಜಿ. ಕ್ಯಾಂಪಸ್ಗೆ ನೂತನ ವ್ಯವಸ್ಥೆಗಳ ಈಜುಕೊಳದ ಅಗತ್ಯತೆಯನ್ನು ಮನಗಂಡು ಈ ಈಜುಕೊಳದ ನಿರ್ಮಾಣ ಮಾಡಲಾಗಿದೆ. ಇದರ ಸದುಪಯೋಗವನ್ನು ಎಲ್ಲರು ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಆಧುನಿಕ ಸ್ಪರ್ಶತೆಯನ್ನು ಹೊಂದಿ ಸರ್ವರಿಗೂ ಉಪಯೋಗ ಆಗುವಂತಾಗಲಿ ಎಂದು ಶುಭಹಾರೈಸಿದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ನಗರ ಪಂಚಾಯತ್ನ ಮಾಜಿ ಅಧ್ಯಕ್ಷರಾದ ಎನ್. ರಾಮಚಂದ್ರಅವರು ಮಾತನಾಡಿ, ಕ್ಯಾಂಪಸ್ನ ಸರ್ವತೋಮುಖ ಬೆಳವಣಿಗೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ದೊಡ್ಡದು. ಈ ಈಜುಕೊಳ ವಿದ್ಯಾರ್ಥಿಗಳ ಮಾನಸಿಕ, ದೈಹಿಕ ಕ್ಷಮತೆಯನ್ನು ಹೆಚ್ಚಿಸಿ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗಲೆಂದು ಶುಭ ಹಾರೈಸಿದರು. ಸಮಾರಂಭದಲ್ಲಿ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ವಿಭಾಗದ ಮುಖ್ಯಸ್ಥರಾದ ಡಾ. ಉಜ್ವಲ್ ಊರುಬೈಲು, ಕೆ.ವಿ.ಜಿ ಪಾಲಿಟೆಕ್ನಿಕ್ನ ಪ್ರಾಂಶುಪಾಲರಾದ ಜಯಪ್ರಕಾಶ್ ಕಲ್ಲುಗದ್ದೆ, ಅಮರಜ್ಯೋತಿ ಪಿಯು ಕಾಲೇಜಿನ ಪ್ರಾಂಶುಪಾಲೆ ಡಾ. ಯಶೋದ ರಾಮಚಂದ್ರ, ಕೆ.ವಿ.ಜಿಐ.ಟಿ.ಐ ಕಾಲೇಜಿನ ಪ್ರಾಂಶುಪಾಲರಾದ ಚಿದಾನಂದ ಗೌಡ ಬಾಳಿಲ, ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಮನೋಜ್ಕುಮಾರ್ ಅಡ್ಡಂತಡ್ಕ, ಕೆ.ವಿ.ಜಿದಂತ ಮಹಾವಿದ್ಯಾಲಯದ ಆಡಳಿತಧಿಕಾರಿ ಬಿ.ಟಿ ಮಾಧವ, ಕೆ.ವಿ.ಜಿಐ.ಟಿ.ಐ. ತರಬೇತಿ ಅಧಿಕಾರಿ ದಿನೇಶ್ ಮಡ್ತಿಲ, ಉಪಾಧ್ಯಕ್ಷರ ಆಪ್ತ ಕಾರ್ಯದರ್ಶಿ ಭವಾನಿಶಂಕರ ಅಡ್ತಲೆ, ಕೆ.ವಿ.ಜಿ ಪವರ್ ಹೌಸ್ನಕಾರ್ಯ ನಿರ್ವಾಹಣಾಧಿಕಾರಿಯಾದ ವಸಂತ ಕಿರಿಭಾಗ, ಎ.ಓ.ಎಲ್.ಇ ಆಡಳಿತಾಧಿಕಾರಿ ಪ್ರಸನ್ನ ಕಲ್ಲಾಜೆ, ಕೆ.ವಿ.ಜಿ ವಿದ್ಯಾಸಂಸ್ಥೆಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು.