ಇಂದು ನಿಧನರಾದ ಸಾಹಿತಿ ಟಿ.ಜಿ.ಮುಡೂರು ಅವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ನಾಳೆ ಅಪರಾಹ್ನ ಪಂಜದಲ್ಲಿ ನಡೆಯಲಿದೆ.
ಪುತ್ತೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಮುಡೂರು ಅವರ ಪಾರ್ಥಿವ ಶರೀರವನ್ನು ಇಂದು ಪಂಜಕ್ಕೆ ತರಲಾಗುತ್ತಿದ್ದು, ನಾಳೆ ಪೂರ್ವಾಹ್ನ ಅಂತಿಮ ದರ್ಶನದ ಬಳಿಕ ಅಪರಾಹ್ನ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.