ನಿನ್ನೆ ಸುಳ್ಯದ ಗಾಂಧಿನಗರದಲ್ಲಿ ತೆಂಗಿನಕಾಯಿ ಲೋಡಿನ ಲಾರಿಯಡಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿ ತೀವ್ರ ಜಖಂಗೊಂಡಿದ್ದ ಯುವಕ ಇಂದು ಬೆಳಿಗ್ಗೆ ಮಂಗಳೂರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನ ಮಂಜುನಾಥ್ ಎಂಬ ಯುವಕ ಕೆಲವು ಸಮಯದಿಂದ ಸುಳ್ಯದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಆತನ ಪತ್ನಿ ಮತ್ತು ಮಗ ಕೂಡ ಜತೆಗೆ ವಾಸವಾಗಿದ್ದರು. ಇತ್ತೀಚೆಗೆ ಆತ ಪತ್ನಿ ಮತ್ತು ಮಗುವನ್ನು ಊರಿಗೆ ಕಳಿಸಿದ್ದನೆನ್ನಲಾಗಿದೆ. ಮಾನಸಿಕವಾಗಿ ಜರ್ಜರಿತಗೊಂಡಂತೆ ಕಂಡುಬರುತ್ತಿದ್ದ ಈ ಯುವಕ ನಿನ್ನೆ ಮಧ್ಯಾಹ್ನ ಸುಳ್ಯ ಗಾಂಧಿನಗರದಲ್ಲಿ ತೆಂಗಿನಕಾಯಿ ಹೇರಿಕೊಂಡು ಹೋಗುತ್ತಿದ್ದ ಲಾರಿಯ ಚಕ್ರದಡಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿ ತೀವ್ರ ಜಖಂಗೊಂಡಿದ್ದ. ಆತನನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ 6.30 ರ ಸುಮಾರಿಗೆ ಆತ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ.