ಕಾಸರಗೋಡು ತಾಲ್ಲೂಕು ಮುಳ್ಳೇರಿಯ ಗ್ರಾಮದ ಕುಳದ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಎ. 22, 23ರಂದು ನಡೆಯಲಿರುವುದು. ಎ. 22 ರಂದು ರಾತ್ರಿ ಕುಳದ ದೈವಸ್ಥಾನದಿಂದ ಕುಳದಪಾರೆ ಗೆ ಭಂಡಾರ ಹೊರಡುವುದು, ಮೇಲೇರಿಗೆ ಅಗ್ನಿಸ್ಪರ್ಶ, ಶ್ರೀ ವಿಷ್ಣುಮೂರ್ತಿ ದೈವದ ಕುಲ್ಚಾಟ, ಸಾಂಸ್ಕೃತಿಕ ಕಾರ್ಯಕ್ರಮ, ಯಕ್ಷಗಾನ ಬಯಲಾಟ ನಡೆಯಲಿರುವುದು. ಎ. 23ರಂದು ಬೆಳಿಗ್ಗೆ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಸೇವೆ, ಅರಸಿನ ಪ್ರಸಾದ ಸ್ವೀಕಾರ ನಡೆಯಲಿರುವುದು ಎಂದು ಕುಳದ ಕುಟುಂಬಸ್ಥರಾದ ಬಾಲಕೃಷ್ಣ ಮಣಿಯಾಣಿಯವರು ತಿಳಿಸಿದ್ದಾರೆ.