ಗುತ್ತಿಗಾರು: ರಾತ್ರಿ ಪಾಳೆಯದಲ್ಲಿ ಮೆಸ್ಕಾಂ ಸಿಬ್ಬಂದಿಗಳನ್ನು ನಿಯೋಜಿಸಲು ಮನವಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಗುತ್ತಿಗಾರಿನಲ್ಲಿ ರಾತ್ರಿ ಪಾಳೆಯದಲ್ಲಿ ಮೆಸ್ಕಾಂ ಸಿಬ್ಬಂದಿಗಳನ್ನು ನಿಯೋಜಿಸಲು ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.

ಸುಬ್ರಮಣ್ಯ ಹಾಗೂ ಗುತ್ತಿಗಾರು ಮೆಸ್ಕಾಂ ಇಲಾಖೆಗೆ ಸಂಬಂಧಪಟ್ಟಂತೆ ರಾತ್ರಿ ಪಾಳಯದಲ್ಲಿ ಮೆಸ್ಕಾಂ ಸಿಬ್ಬಂದಿಗಳು ಲೈನ್ ಮ್ಯಾನ್ ಗಳು ಇಲ್ಲದೆ ವಿದ್ಯುತ್ ಸಮಸ್ಯೆ ಗಳು ಉಂಟಾದರೆ ಕೇಳುವವರೇ ಇಲ್ಲದಂತಾಗಿದೆ. ಕಳೆದ ಕೆಲವು ದಿನಗಳಿಂದ ಸಂಜೆ ಏಳು ಗಂಟೆಗೆ ವಿದ್ಯುತ್ ಹೋದರೆ ನಂತರ ಬರುವುದು ಮರುದಿನ ಬೆಳಿಗ್ಗೆಯೇ. ಈ ಬಗ್ಗೆ ಸಂಬಂಧಪಟ್ಟವರಲ್ಲಿ ವಿಚಾರಿಸಿದಾಗ ರಾತ್ರಿ ಪಾಳಯದಲ್ಲಿ ಲೈನ್ ಮ್ಯಾನ್ ಗಳ ನಿಯೋಜನೆ ಇಲ್ಲದಿರುವುದರಿಂದ ಸಮಸ್ಯೆ ಉಂಟಾಗಿದೆ. ರಾತ್ರಿ ಪಾಳಯದಲ್ಲಿ ವಿದ್ಯುತ್ ಇಲ್ಲದಿದ್ದರೆ ಕಳ್ಳರು ಕಾಕರು ತನ್ನ ಕೈಚಳಕ ತೋರಿಸಲು ಬಹಳ ಅನುಕೂಲಕರವಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ ರಾತ್ರಿ ಪಾಳ್ಯದಲ್ಲಿ ಲೈನ್ ಮ್ಯಾನ್ ಗಳನ್ನು ನಿಯೋಜಿಸಿ ಸಮಸ್ಯೆಯನ್ನು ಪರಿಹರಿಸುವಂತೆ ವಿದ್ಯುತ್ ಬಳಕೆದಾರರು ಒತ್ತಾಯಿಸುತ್ತಿದ್ದಾರೆ. (ವರದಿ.ಡಿ.ಹೆಚ್.)

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.