ಸುಳ್ಯ ವಕೀಲರ ಸಂಘದ ಸಭಾಂಗಣದಲ್ಲಿ ಎ.18ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಸೋಮಶೇಖರ ಎ ಹಿರಿಯ ಸಿವಿಲ್ ನ್ಯಾಯಾಧೀಶರು ಹಿರಿಯ ವಿಭಾಗದ ನ್ಯಾಯಾಲಯ ಸುಳ್ಯ, ಗೌರವ ಉಪಸ್ಥಿತಿ ಯಶವಂತ್ ಕುಮಾರ್ ಕೆ.ನ್ಯಾಯಧೀಶರು, ಸಿವಿಲ್ ನ್ಯಾಯಾಧೀಶರು&ಜೆ ಎಂ ಎಪ್ ಸಿ ಸುಳ್ಯ ಮುಖ್ಯ ಭಾಷಣಕಾರರಾಗಿ ಕೇಶವ ಬಂಗೇರ ಪ್ರಾಧ್ಯಾಪಕರು ನಾರಾಯಣ ಗುರು ಪದವಿಪೂರ್ವ ಕಾಲೇಜು ಕುದ್ರೋಳಿ ಮಂಗಳೂರು ಇವರು ಅಂಬೇಡ್ಕರ್ ಕುರಿತು ಉಪನ್ಯಾಸ ನೀಡಿದರು. ಮುಖ್ಯ ಅತಿಥಿಯಾಗಿ ಸರ್ಕಾರಿ ಸಹಾಯಕ ಅಭಿಯೋಜಕರಾದ ಜನಾರ್ದನ ಬಿ, ಹಿರಿಯ ನ್ಯಾಯವಾದಿ ನಳಿನ್ ಕುಮಾರ್ ಕೋಡ್ತುಗಳಿ, ಸುಕುಮಾರ್ ಕೋಡ್ತುಗುಳಿ, ವಕೀಲರ ಸಂಘದ ಕಾರ್ಯದರ್ಶಿ ವಿನಯ್ ಕುಮಾರ್ ಮುಳುಗಾಡು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ನಾರಾಯಣ ಕೆ ವಹಿಸಿದ್ದರು. ವಕೀಲರ ಸಂಘದ ಕಾರ್ಯದರ್ಶಿ ವಿನಯ್ ಕುಮಾರ್ ಮುಳುಗಾಡು ಸ್ವಾಗತಿಸಿ, ವಕೀಲರ ಸಂಘದ ಕೋಶಾಧಿಕಾರಿ ಜಗದೀಶ್ ಡಿ ಪಿ ವಂದಿಸಿದರು.ನ್ಯಾಯವಾದಿ ದಿನೇಶ್ ಕೆ ಕಾರ್ಯಕ್ರಮ ನಿರೂಪಿಸಿದರು.