ಪ್ರಸ್ತುತ ಆಯುಷ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಂಗಳೂರು ಇಲ್ಲಿ ನರ್ಸಿಂಗ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗಾರು ಗ್ರಾಮದ ವಳಲಂಬೆಯ ಬಳಿಯ ದಂಬೆಕೋಡಿಯ ಸುನಂದ ಡಿ.ಆರ್. ಸರ್ವೋತ್ತಮ ಪ್ರಶಸ್ತಿಯನ್ನು ದ.ಕ ಜಿಲ್ಲಾಡಾಳಿತ ಎ.21 ರಂದು ಮಂಗಳೂರಿನ ಟೌನ್ ಪ್ರದಾನಮಾಡಿದೆ.
ಜಿಲ್ಲಾಧಿಕಾರಿ ರಾಜೇಂದ್ರ ಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು. ಸುನಂದ ಅವರ
ಪತಿ ಗಂಗಾಧರ ದಂಬೆಕೋಡಿ.
ಸುನಂದರು ಕರ್ನಾಟಕ ರಾಜ್ಯ ಸರಕಾರಿ ನೌಕರರ ಆರೋಗ್ಯಮತ್ತು ಶಿಕ್ಷಣ ಇಲಾಖೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ,
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮಂಗಳೂರು ಕಾರ್ಯಕಾರಿ ಸಮಿತಿ ಸದಸ್ಯರಾಗಿ. ದಕ್ಷಿಣ ಕನ್ನಡ ಜಿಲ್ಲಾ ನರ್ಸಿಂಗ್ ಎಸೋಸಿಯೇಶನ್ ಸದಸ್ಯರಾಗಿ, ಸರಕಾರಿ ನೌಕರರ ಮಹಿಳಾ ವಸತಿಗ್ರಹ ಇಲ್ಲಿ ಕಾರ್ಯದರ್ಶಿಯಾಗಿ,
ಸರಕಾರಿ ಆರೋಗ್ಯ ಮತ್ತು ಶಿಕ್ಷಣ ಇಲಾಖ ನೌಕರರ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ,
ಮಂಗಳೂರು ಒಕ್ಕಲಿಗ ಯಾನೆ ಗೌಡರ ಸಂಘದ ನಿರ್ದೇಶಕರಾಗಿ, ಮಂಗಳೂರು ಒಕ್ಕಲಿಗ ಯಾನೆ ಗೌಡರ ಸಂಘದ ಮಹಿಳಾ ಘಟಕದ ಖಜಾಂಚಿಯಾಗಿ ಕೆಲಸ ಮಾಡಿರುತ್ತಾರೆ.