ಸಚಿವ ಎಸ್. ಅಂಗಾರರಿಂದ ಚಾಲನೆ
ಕಾನೂನು ಮಾಹಿತಿ ಕಾರ್ಯಾಗಾರ ಅಧಿಕಾರಿಗಳೊಂದಿಗೆ ಜನರ ಸಂವಹನ
ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ, ದ.ಕ. ಜಿಲ್ಲಾಡಳಿತದ ಸಹಯೋಗದೊಂದಿಗೆ ಸುದ್ದಿ ಜನಾಂದೋಲನ ವೇದಿಕೆ, ಜನಪ್ರತಿನಿಧಿಗಳ ಮತ್ತು ಸಂಘಸಂಸ್ಥೆಗಳ ಸಹಕಾರದೊಂದಿಗೆ ಸುಳ್ಯ ತಾಲೂಕಿನ ಅಧಿಕಾರಿಗಳಿಗೆ, ಸಾರ್ವಜನಿಕರಿಗೆ ಕಾನೂನು ಮಾಹಿತಿ ಹಾಗೂ ಲಂಚ – ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ಅಧಿಕಾರಿಗಳ ಮತ್ತು ಜನರ ಜವಾಬ್ದಾರಿಯ ಕುರಿತು ಕಾನೂನು ಮಾಹಿತಿ ಕಾರ್ಯಾಗಾರ, ಅಧಿಕಾರಿಗಳೊಂದಿಗೆ ಜನರ ಸಂವಹನ ಕಾರ್ಯಕ್ರಮವು ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ಎ.22ರಂದು ಜರುಗಿತು.
ಸುಳ್ಯದ ಲಾಲ್ ಬಹಾದ್ದೂರ್ ಶಾಸ್ತ್ರಿ ವೃತ್ತದಿಂದ ಪ್ರಾರಂಭಗೊಂಡ ಬೃಹತ್ ವಾಹನ ಜಾಥಾಕ್ಕೆ ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಅವರು ಚಾಲನೆ ನೀಡಿ, ಶುಭಹಾರೈಸಿದರು.
ಬಳಿಕ ಸುಳ್ಯದ ಪ್ರಮುಖರಸ್ತೆಯಾಗಿ ಸಾಗಿದ ಬೃಹತ್ ವಾಹನ ಜಾಥಾವು ಗಾಂಧಿನಗರ, ರಥಬೀದಿಯ ಮೂಲಕ ಕೆ.ವಿ.ಜಿ. ಕ್ಯಾಂಪಸ್ , ವಿವೇಕಾನಂದ ಸರ್ಕಲ್ ಮೂಲಕ ಸಾಗಿ ಶಿವಕೃಪಾ ಕಲಾಮಂದಿರಕ್ಕೆ ಸಾಗಿ ಬಂದಿತು.
ಶಿವಕೃಪಾ ಕಲಾಮಂದಿರದಲ್ಲಿ ಜರುಗಿದ ಸಭಾ ಕಾರ್ಯಕ್ರಮವನ್ನು ಪುತ್ತೂರು ಸಹಾಯಕ ಆಯುಕ್ತರಾದ ಗಿರೀಶ್ ನಂದನ್ ಉದ್ಘಾಟಿಸಿದರು. ಸುದ್ದಿ ಸಮೂಹ ಮಾಧ್ಯಮ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದರು ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಸಿವಿಲ್ ನ್ಯಾಯಾಲಯದ ಹಿರಿಯ ನ್ಯಾಯಾದೀಶ ಎ. ಸೋಮಶೇಖರ್, ಕಿರಿಯ ನ್ಯಾಯಾದೀಶ ಯಶೋದ್ ಕುಮಾರ್, ತಹಶಿಲ್ದಾರ್ ಕು. ಅನಿತಾಲಕ್ಷ್ಮಿ, ಸಿ.ಡಿ.ಪಿ.ಒ. ಶ್ರೀಮತಿ ರಶ್ಮಿ ಅಶೋಕ್ ನೆಕ್ರಾಜೆ, ಎ.ಪಿ.ಪಿ. ಜನಾರ್ದನ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಚಿವರು ವಾಹನ ಜಾಥಾಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಸಿ. ಜಯರಾಮ, ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಗೌಡ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್, ಬಿಜೆಪಿ ಮಂಡಲ ಸಮಿತಿ ಪ್ರ.ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಪಿ.ಎಸ್. ಗಂಗಾಧರ,ಗುತ್ತಿಗಾರು ವಲಯ ರಿಕ್ಷಾ ಚಾಲಕರ ಸಂಘದ ಚಂದ್ರಶೇಖರ ಕಡೋಡಿ, ಜೇಸಿ ಗುರುರಾಜ್ ಅಜ್ಜಾವರ, ಶಾರದಾಂಬಾ ಸೇವಾ ಸಮಿತಿ ಅಧ್ಯಕ್ಷ ಚಿದಾನಂದ ವಿದ್ಯಾನಗರ, ತಾಲೂಕು ಯಾದವ ಸಭಾ ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ರಾಜೀವಿ ಪರ್ಲಿಕಜೆ, ಜೇಸಿಐ ಸುಳ್ಯ ಪಯಸ್ವಿನಿ, ಜೇಸಿಐ ಸುಳ್ಯ ಸಿಟಿ, ಸುಳ್ಯ ತಾಲೂಕು ಟೈಲರ್ ಅಸೋಸಿಯೇಷನ್, ಜೀಪು ಚಾಲಕರ ಸಂಘ, ಮಡಪ್ಪಾಡಿ ಮಹಾತ್ಮಾ ಗಾಂಧಿ ತಂಡ ಸೇರಿದಂತೆ ಸುಳ್ಯ , ಪುತ್ತೂರು, ಬೆಳ್ತಂಗಡಿ ಸುದ್ದಿ ಬಳಗದ ಸಿಬ್ಬಂದಿಗಳು ಉಪಸ್ಥಿತರಿದ್ದರು.