ಕುಕ್ಕುಜಡ್ಕ ವಿಷ್ಣುನಗರ ವಿಷ್ಣುಮೂರ್ತಿ ರಕ್ತೇಶ್ವರಿ ದೈವಸ್ಥಾನದ ಪ್ರತಿಷ್ಠಾ ಕಲಶಾಭಿಷೇಕ- ಹಸಿರುವಾಣಿ ಮೆರವಣಿಗೆಗೆ ಚಾಲನೆ -ಉಗ್ರಾಣ ತುಂಬುವ ಕಾರ್ಯಕ್ರಮ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ವಿಷ್ಣುನಗರ ಶ್ರೀವಿಷ್ಣುಮೂರ್ತಿ ಶ್ರೀ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ದೈವಸ್ಥಾನದ ನವೀಕರಣ ಪುನಃ ಪ್ರತಿಷ್ಠಾ ಕಲಶಾಭಿಷೇಕ ಕಾರ್ಯಕ್ರಮವು ಎ. 22ರಿಂದ 26ರ ತನಕ ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದ್ದು ಅದರ ಪೂರ್ವ ಭಾವಿಯಾಗಿ ಇಂದು ಬೆಳಗ್ಗೆ ಹಸಿರುವಾಣಿ ಮೆರವಣಿಗೆಯು ವಾಹನಾ ಜಾಥಾದೊಂದಿಗೆ ಚೆಂಡೆ ವಾದನದೊಂದಿಗೆ ಅದ್ದೂರಿಯಾಗಿ ಗ್ರಾಮದ ಹಲವು ಕಡೆಯಿಂದ ಏಕಕಾಲದಲ್ಲಿ ಆರಂಭಗೊಂಡಿತು. ಮೆರವಣಿಗೆಯು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಾಗಿ ಬಂದು ದೈವಸ್ಥಾನದ ಸಾನಿಧ್ಯದಲ್ಲಿ ಸಮಾಪನಗೊಂಡಿತು. ಬಳಿಕ ಉಗ್ರಾಣ ತುಂಬುವ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಪದ್ಮನಾಭ ತಂತ್ರಿವರ್ಯರು, ದೈವಸ್ಥಾನದ ಅರ್ಚಕರು, ಆಡಳಿತ ಸಮಿತಿ ವ್ಯವಸ್ಥಾಪಕರಾದ ಯಂ.ಜಿ.ಸತ್ಯನಾರಾಯಣ, ಬ್ರಹ್ಮಕಲಶೋತ್ಸವ. ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು , ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಘವೇಂದ್ರ ಪುಳಿಮಾರಡ್ಕ,
ಆಡಳಿತ ವರ್ಗದ ಸದಸ್ಯ ರಾದ ಶ್ರೀಮತಿ ಲತೇಶ್ವರೀ, ಯಂ.ಎಸ್.ಶ್ರೀಶ ಕುಮಾರ, ಯಂ.ಎಸ್.ಹರ್ಷಕುಮಾರ, ಪ್ರಕಾಶ ಯಂ.ಎಸ್, ಹಾಗೂ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಉಪಸಮಿತಿಯ ಸಂಚಾಲಕರು, ಸದಸ್ಯರು ಹಾಗೂ ಗ್ರಾಮದ ಭಕ್ತಾದಿಗಳು ಭಾಗವಹಿಸಿದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.