ಸುಬ್ರಹ್ಮಣ್ಯದ ಕೆ ಎಸ್ ಎಸ್ ಕಾಲೇಜಿನ ಪ್ರಾಂಶುಪಾಲರಾಗಿ ಆಸಿಸ್ಟೆಂಟ್ ಫ್ರೋಪೆಸರ್ ಡಾ। ದಿನೇಶ್ ಪಿ ಟಿ ಇವರು ಅಧಿಕಾರ ಸ್ವೀಕರಿಸಿದ್ದಾರೆ.
ಅರ್ಥಶಾಸ್ತ್ರ ಉಪನ್ಯಾಸಕರಾಗಿರುವ ಇವರು ಮೈಸೂರು ಯುನಿವರ್ಸಿಟಿಯಲ್ಲಿ 11 ವರ್ಷಗಳಿಂದ ಅಸಿಸ್ಟೆಂಟ್ ಪ್ರೋಫೆಸರ್ ಆಗಿದ್ದು ಕಳೆದ ಎಂಟು ತಿಂಗಳಿನಿಂದ ಸುಬ್ರಹ್ಮಣ್ಯದಲ್ಲಿ ಉಪನ್ಯಾಸಕರಾಗಿದ್ದಾರೆ. ಇವರು ಮೂಲತಹ ಸುಳ್ಯದ ಅಂಬೆಟಡ್ಕ ನಿವಾಸಿ. ದಿ.ತಂಬಿ ಮತ್ತು ಕಾಸಲಮ್ಮ ದಂಪತಿಗಳ ಪುತ್ರ. ಪತ್ನಿ ಸಂದ್ಯಾ. ದಿನೇಶ್ ಅವರು ಪ್ರಾಥಮಿಕ ಶಿಕ್ಷಣವನ್ನು ಸುಳ್ಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢಶಾಲಾ ಶಿಕ್ಷಣವನ್ನು ಸುಳ್ಯ ಜೂನಿಯರ್ ಕಾಲೇಜಿನಲ್ಲಿ, ಪಿ ಯು ಮತ್ತು ಪದವಿ ಶಿಕ್ಷಣವನ್ನು ಎನ್ ಎಂ ಸಿ ಯಲ್ಲಿ ಪಡೆದು. ಮಂಗಳೂರು ಯುನಿವರ್ಸಿಟಿಯಲ್ಲಿ ಎಂ ಎ ಪದವಿ ಪಡೆದಿದ್ದಾರೆ. ಇಂದು ಡಾ। ಗೋವಿಂದ ಎನ್ ಎಸ್ ಅವರಿಂದ ಅಧಿಕಾರ ಸ್ವೀಕರಿಸಿದರು. ವ್ಯವಸ್ಥಾಪನಾ ಸಮಿತಿಯ ಶೋಭಾ ಗಿರಿಧರ್, ವನಜಾ ಭಟ್ ಮತ್ತಿತರರು ಉಪಸ್ಥಿತರಿದ್ದರು.