ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜಿನ 2021-22 ನೇ ಸಾಲಿನ ಪ್ರಥಮ ಬಿ.ಎ.ಎಂ.ಎಸ್ ಹಾಗೂ ಪ್ರಥಮ ಎಂ.ಡಿ./ಎA.ಎಸ್ (ಆಯು.) ಸ್ನಾತ್ತಕೋತರ ತರಗತಿಗಳು ವಿದ್ಯುಕ್ತವಾಗಿ ಆರಂಭವಾಯಿತು.
ಡಾ. ಚಿದಾನಂದ ಕೆ. ವಿ. ಅಧ್ಯಕ್ಷರು AOLE ಸುಳ್ಯ ಇವರು ಸಮಾರಂಭವನ್ನು ಉದ್ಘಾಟಿಸಿ, ವಿದ್ಯಾಭ್ಯಾಸದ ಪ್ರಾಮುಖ್ಯತೆ ವಿವರಿಸುತ್ತಾ, ಆಯುರ್ವೇದ ಅತ್ಯಂತ ಹೆಚ್ಚು ಜನಪ್ರಿಯತೆ ಗಳಿಸಿದೆ. ಆದ್ದರಿಂದ ನೀವು ಉತ್ತಮವಾದ ನಿರ್ಧಾರ ಕೈಗೊಂಡಿರುವಿರಿ ಎಂದು ಹೇಳಿದರು. ವಿಶ್ವದಾದ್ಯಂತ ಆಯುರ್ವೇದ ಔಷಧ ಮತ್ತು ವೈದ್ಯರಿಗೆ ಮಾನ್ಯತೆ ಇದೆ. ನಮ್ಮ ಪ್ರಧಾನ ಮಂತ್ರಿ ಯೋಗ ಮತ್ತು ಆಯುರ್ವೇದ ಆಯುಷ್ನ್ನು ಮುಂಚೂಣಿಯ ಚಿಕಿತ್ಸಾ ವಿಷಯವನ್ನಾಗಿ ಮಾಡಿರುತ್ತಾರೆ ಎಂದು ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಶ್ರೀ. ನವೀನ್ ಚಂದ್ರ ಜೋಗಿ, ವೃತ್ತ ನಿರೀಕ್ಷರು, ಸುಳ್ಯ ಭಾಗವಹಿಸಿ ವಿದ್ಯಾರ್ಥಿಗಳಿಗೆ ರ್ಯಾಗಿಂಗ್ ಹಾಗೂ ಮಾದಕ ದ್ರವ್ಯ ವ್ಯಸನದ ಬಗ್ಗೆ ಎಚ್ಚರ ವಹಿಸಬೇಕು ಎಂದು ಕರೆ ನೀಡಿದರು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ. ಅಕ್ಷಯ್ ಕೆ. ಸಿ., ಇವರು ಭಾಗವಹಿಸಿ ವಿದ್ಯಾರ್ಥಿಗಳು ಆಯುರ್ವೇದ ಆರಿಸಿಕೊಂಡು, ಅದನ್ನು ಅಭ್ಯಾಸ ಮಾಡಿ ಜಗತ್ತಿಗೆ ದೊಡ್ಡ ಕೊಡುಗೆ ನೀಡಬೇಕು ಎಂದು ಹೇಳಿ ನೂತನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಬೆಂಗಳೂರು ಇದರ ಸೆನೆಟ್ ಸದಸ್ಯರಾದ ಡಾ ಐಶ್ವರ್ಯ ಕೆ. ಸಿ., ಭಾಗವಹಿಸಿ ಶುಭಹಾರೈಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ ಡಿ.ವಿ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ, ವಿದ್ಯಾರ್ಥಿಗಳಿಗೆ ವಿಧ್ಯಾಭ್ಯಾಸದ ಪ್ರಾಮುಖ್ಯತೆ ಹಾಗೂ ಕಾಲೇಜಿನ ನಿಯಮಗಳನ್ನು ವಿವರಿಸಿ ಶುಭಹಾರೈಸಿದರು.
ವೇದಿಕೆಯಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಕಾರ್ಯದರ್ಶಿಗಳಾದ ಶ್ರೀ. ಕೆ. ವಿ. ಹೇಮನಾಥ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಆಡಳಿತಾಧಿಕಾರಿ ಶ್ರೀ. ಜಗದೀಶ ಅಡ್ತಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾಲೇಜಿನ ತ್ರೆöÊಮಾಸಿಕ ಪತ್ರಿಕೆ “ಆಯುರ್ ನ್ಯೂಸ್-ಸಂಸ್ಕಾರವನ್ನು” ಡಾ. ಚಿದಾನಂದ ಕೆ. ವಿ. ಇವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಬೆಂಗಳೂರು, ಇದರ ಸೆನೆಟ್ ಸದಸ್ಯರಾದ ಡಾ. ಐಶ್ವರ್ಯ ಕೆ. ಸಿ., ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಪ್ರಧಾನ ಕಾರ್ಯದರ್ಶಿಗಳಾದ ಅಕ್ಷಯ್ ಕೆ. ಸಿ., ಮತ್ತು ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ವಿಜೇತರಾದ ಡಾ. ಮೇಘನಾ ಸಿ., ಇವರನ್ನು ಕಾಲೇಜು ಹಾಗೂ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು.
ಡಾ. ವಿನಯಶಂಕರ ಭಾರಧ್ವಾಜ್ ಸ್ವಾಗತಿಸಿ, ಡಾ. ಪ್ರತಿಮಾ ಗುಪ್ತಾ ವಂದಿಸಿದರು. ಕು. ಚಿತ್ಕಲಾ ಭಾರದ್ವಾಜ್ ಮತ್ತು ಕು. ಅಶ್ವಿನಿ ಪ್ರಾರ್ಥಿಸಿದರು. ಕಾರ್ಯಕ್ರಮವನ್ನು ಡಾ. ನಿಲೋಫರ್ ತಹನಿ , ಹಾಗೂ ಕು. ಅನುಷಾ ಮಡಪ್ಪಾಡಿ ನಿರೂಪಿಸಿದರು.