ನಿವೃತ್ತ ಪ್ರಾಂಶುಪಾಲ ಕುಂಜಾಡಿ ನಾರಾಯಣ ರೈ ಅವರು ಇತ್ತೀಚೆಗೆ ನಿಧನ ಹೊಂದಿದ್ದು, ಮೃತರ ಶ್ರದ್ಧಾಂಜಲಿ ಕಾರ್ಯಕ್ರಮ ಮತ್ತು ವೈಕುಂಠ ಸಮಾರಾಧನೆ ಏ.22ರಂದು ಕುಂಜಾಡಿಯಲ್ಲಿ ನೆರವೇರಿತು.
ಕುಂಜಾಡಿ ಮನೆತನದ ಸೇವಾಜೆ ಅಮೃತ್ ಕುಮಾರ್ ರೈ ಯವರು ನಾರಾಯಣ ರೈ ಅವರ ಜೀವನ ಚರಿತ್ರೆ ವಿವರಿಸಿ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಉಪನ್ಯಾಸಕ ಎಸ್.ಜಿ ಕೃಷ್ಣರವರು ನಾರಾಯಣ ರೈ ಯವರ ವೃತ್ತಿಯ ಶಿಸ್ತಿನ ಕ್ರಮ, ಅವರ ನಡವಳಿಕೆಯ ಬಗ್ಗೆ ಮಾತನಾಡಿ ನುಡಿನಮನ ಸಲ್ಲಿಸಿದರು. ಬಳಿಕ ನಾರಾಯಣ ರೈ ಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ಕುಂಜಾಡಿ ಮತ್ತು ಕೊಡ್ಮಾನ್ ಗುತ್ತು ಕುಟುಂಬಸ್ಥರು ನೆಂಟರಿಷ್ಟರು ಹಿತೈಷಿಗಳು ಅಭಿಮಾನಿಗಳು ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ : ಸಂಕಪ್ಪ ಸಾಲಿಯಾನ್