ಬಾರಿ ಗಾಳಿ ಮಳೆಗೆ ಮರ ಉರುಳಿ ಬಿದ್ದು ಮನೆಗೆ ಹಾನಿ ಸಂಭವಿಸಿದ ಘಟನೆ ಎ.22ರಂದು ಸಂಜೆ ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ಸಂಭವಿಸಿದೆ.
ಅಡ್ಕಾರಿನ ರಮೇಶ ಎಂಬವರ ಮನೆಗೆ ಗಾಳಿ ಸಹಿತ ಮಳೆಗೆ ಮರವೊಂದು ಉರುಳಿ ಬಿದ್ದಿದ್ದು, ಸುಮಾರು ನೂರೈವತ್ತು ಹಂಚು ಹಾಗೂ ಕಬ್ಬಿಣದ ಶೀಟ್ ಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.