ಜೆಡಿಎಸ್ ಪಕ್ಷದ ” ಜನತಾ ಜಲಧಾರೆ ರಥ ಏ.21ರಂದು ಕಡಬ ಮಾಗ೯ವಾಗಿ ಸಂಚರಿಸಿ ಕುಮಾರಧಾರಕ್ಕೆ ಆಗಮಿಸಿತ್ತು. ಇಲ್ಲಿ ಕುಮಾರಧಾರ ನದಿಯ ನೀರು ಸಂಗ್ರಹಿಸಿ ಪೂಜೆ ಮಾಡಿ ಕಲಶಕ್ಕೆ ಹಾಕಲಾಯಿತು. ನಂತರ ರಥ ಸಕಲೇಶಪುರ ಮಾರ್ಗವಾಗಿ ಸಾಗಿತು.
ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಾಕೆ ಮಾಧವ ಗೌಡ, ತಾಲೂಕು ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ, ಜಿಲ್ಲಾ ಯುವ ಜನತಾದಳ ಅಧ್ಯಕ್ಷ ಅಕ್ಷತ್ ಸುವರ್ಣ, ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಜ್ಯೋತಿ ಪ್ರೇಮಾನಂದ, ಮಹಿಳಾ ಘಟಕದ ಅಧ್ಯಕ್ಷೆ ರಮೀಜಾ ನಝೀರ್, ಸುಮತಿ ಹೆಗಡೆ, ದಿನಕರ್ ಕುಲಾಲ್ ಉಳ್ಳಾಲ್, ಸುರೇಶ್ ಕುಮಾರ್, ಉಮ್ಮರ್ ಫಾರೂಕ್, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯ ನಾರಾಯಣ ಅಗ್ರಹಾರ, ದುಗ್ಗಪ್ಪ ಅಗ್ರಹಾರ, ರಾಕೇಶ್ ಕುಂಟಿಕಾನ, ರಾಜ್ಯ ಸಮಿತಿ ಕಾರ್ಯದರ್ಶಿ ಇಕ್ಬಾಲ್ ಎಲಿಮಲೆ, , ಸುರೇಶ್ ಕುಮಾರ್ ನಡ್ಕ, ಮೋಹನ್ ಚಾಂತಾಳ, ಶಿವರಾಮ ಚಿಲ್ತಡ್ಕ, ಕೋಟೆ ಸೋಮಸುಂದರ್ , ಮತ್ತಿತ್ತರರು ಉಪಸ್ಥಿತರಿದ್ದರು.