ಹಿಂದೆ ಯೋಜನೆ ರೂಪಿಸಿದವರೇ ಈಗ ಯೋಜನೆ ಸರಿಯಿಲ್ಲ ಅನ್ನುವ ಆರೋಪ ಮಾಡುತ್ತಿರುವುದು ಸರಿಯಲ್ಲ : ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸುಬ್ರಹ್ಮಣ್ಯ ದೇವಸ್ಥಾನದ ಮಾಸ್ಟರ್ ಪ್ಲಾನ್ ಯೋಜನೆಯಲ್ಲಿ ಈ ಹಿಂದೆ ಕಾಮಗಾರಿಯ ಯೋಜನೆ ರೂಪಿಸಿದ ವ್ಯಕ್ತಿಗಳೇ ಇಂದು ಅದನ್ನು ಬೇರೆಯವರ ತಲೆಗೆ ಎತ್ತಿ ಕಟ್ಟಿ ಯೋಜನೆ ಸರಿಯಿಲ್ಲ ಎಂಬ ಆರೋಪ ಮಾಡುತ್ತಿರುವುದು ಸರಿಯಲ್ಲ ಇದನ್ನು ನಾವು ಖಂಡಿಸುತ್ತೇವೆ ಎಂದು ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿಯ ಶಿವರಾಮ ರೈ ಹೇಳಿದರು.
ಅವರು ಸುಬ್ರಹ್ಮಣ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಇಂಜಾಡಿಯಲ್ಲಿ ರಸ್ತೆ ನಿರ್ಮಾಣ ಯೋಜನೆ ಮೋಹನ್‌ರಾಂ ಸುಳ್ಳಿ ಈ ಹಿಂದೆ ಇದ್ದ ವ್ಯವಸ್ಥಾಪನಾ ಸಮಿತಿ ಅವಧಿಯಲ್ಲಿ ರೂಪಿಸಿದ ಯೋಜನೆಯಾಗಿದೆ. ಇದೀಗ ಅದನ್ನು ಬೇರೆಯವರ ತಲೆಗೆ ಎತ್ತಿಕಟ್ಟುವ ಕಾರ್ಯ ನಡೆಯುತ್ತಿದೆ. ಇಂತಹ ಆರೋಪ ಮಾಡುವುದು ಸರಿಯಲ್ಲ. ನಾಗ ಸಂಚಾರ ಇರುವ ನಾಗಹಿತ್ಲು ರಸ್ತೆಯೂ ನಿತ್ಯಾನಂದ ಮುಂಡೋಡಿ ಅವರು ಬರುವ ಮೊದಲಿನ ಆಡಳಿತ ರೂಪಿಸಿದ ಯೋಜನೆಯನ್ನು ಈಗ ಅವರೇ ನಾಗ ಸಂಚಾರ ಹಿನ್ನಲೆಯಲ್ಲಿ ರಸ್ತೆ ಬಂದ್ ಮಾಡುವುದು ಎನ್ನುತ್ತಿದ್ದಾರೆ. ನಾಗ ಸಂಚಾರಕ್ಕೆಂದೇ ರಸ್ತೆಯ ಕೆಳ ಭಾಗದಲ್ಲಿ ಪೈಪ್‌ಗಳನ್ನು ಅಳವಡಿಸಲಾಗಿತ್ತು. ಅದನ್ನು ಬಂದ್ ಮಾಡಲಾಗಿದೆ. ಈ ಬಗ್ಗೆ ತನಿಖೆಯಾಗಲಿ ಎಂದರು.

ಸುತ್ತುಪೌಳಿ ವಿಚಾರವಾಗಿ ಕೋರ್ಟ್ ಲ್ಲಿ ಯಾವುದೇ ತಡೆಯಿರಲಿಲ್ಲ. ಅದರ ಟೆಂಡರ್ ಆಗಿದ್ದರೂ ಅದನ್ನು ರದ್ದು ಮಾಡಲಾಯಿತು. ಬಳಿಕ ಮಳೆ ನೀರು ಸೋರಿಕೆಯಾಗುವುದಕ್ಕೂ ಸರಿಪಡಿಸುವ ಕಾರ್ಯ ಮಾಡಿಲ್ಲ. ಈ ಬಗ್ಗೆ ತಪ್ಪು ಸಂದೇಶ ನೀಡಿ ಡಿಪಾಸಿಟ್ ಬಡ್ಡಿ ಹಣ ಲಾಸ್ ಅನ್ನುತ್ತಾರೆ. ಅದಕ್ಕೆ ಅವರೇ ಕಾರಣ ಸಂದೇಶ ನೀಡುವುದನ್ನು ನಿಲ್ಲಿಸಿ ಎಂದು ಅವರು ಆಗ್ರಹಿಸಿದರು. ಈ ಬಗ್ಗೆ ನಾವು ಚರ್ಚೆಗೆ ಸಿದ್ದರಿದ್ದೇವೆ ನೀವು ಇದ್ದೀರಾ ಎಂದರು. ದೇವಳದ ಬಗ್ಗೆ ಈ ಹಿಂದೆ ಪ್ರಶ್ನಾ ಚಿಂತನೆ ನಡೆಸಲಾಗಿದ್ದೂ, ಪುನಃ ಪ್ರಶ್ನಾ ಚಿಂತನೆ ನಡೆಸುವ ಬಗ್ಗೆ ತಿಳಿದುಬಂದಿದೆ. ಈ ರೀತಿ ದುಡ್ಡು ಖರ್ಚು ಮಾಡುವ ಕಾರ್ಯ ಸರಿಯಲ್ಲ ಎಂದರು.
ದೇವಳದಲ್ಲಿ ಒಳಗಿರುವ ಅರ್ಚಕರಿಗೆ ಕೆಲವರಿಗೆ ಕೋಟಿಗಟ್ಟಲೆ ಆದಾಯ, ಕೆಲವು ಸಿಬ್ಬಂದಿಗಳಿಗೆ ಕೇವಲ ಸಂಬಳ ಮಾತ್ರ. ನಿಜವಾಗಿಯೂ ಕಮಿಷನ್ ಕೊಡುವ ಪದ್ಧತಿ, ಒಂದು ಪೂಜೆಗೆ, ಆಶ್ಲೇಷಬಲಿ ನಡೆಯುವ ಸಂದರ್ಭದಲ್ಲಿ ಒಂದೇ ರೀತಿಯ ಸಾಮಾಗ್ರಿ ಪೊರೈಕೆ ಆಗುತ್ತದೆ. ಆದರೆ ಇವರಿಗೆ ಅನಗತ್ಯವಾಗಿ ಕಮಿಷನ್ ಹೋಗುತ್ತದೆ. ಕೋಟಿಗಟ್ಟಲೆ ಕಮಿಷನ್ ದೇವಸ್ಥಾನದಿಂದ ಹೋಗುತ್ತಿದೆ ಎಂದು ಆರೋಪಿಸಿದ ಅವರು ಎಲ್ಲಾ ಸಿಬ್ಬಂದಿಗಳು ಖಾಯಂಮತಿ ಆಗಿರುವುದರಿಂದ ಕಮಿಷನ್ ಪದ್ಧತಿ ರದ್ದಾಗುವ ವ್ಯವಸ್ಥೆ ಆಗಲಿ. ಈ ಬಗ್ಗೆ ಈ ಹಿಂದೆ ಹೋರಾಟ ನಡೆಸಲಾಗಿದ್ದರೂ, ಸರಿಯಾಗಿಲ್ಲ ಎಂದರು. ವಿಷದ ಆಸ್ಪತ್ರೆ ಮಾಡಲು ೫೦ ಎಕ್ರೆ ಜಾಗ ಇಂಜಾಡಿಯಲ್ಲಿ ಎಲ್ಲಿದೆ ಎಂದು ಮೊದಲು ತಿಳಿಸಲಿ ಎಂದರು. ಇವರು ಬಾಯಲ್ಲೇ ಗೋ ಶಾಲೆ ನಿರ್ಮಿಸುವವರು. ಇದ್ದ ಗೋ ಶಾಲೆಯನ್ನು ನೋಡಿಕೊಳ್ಳುವುದಿಲ್ಲ. ಸುಳ್ಳು ಹೇಳುತಿದ್ದಾರೆ, ದೇವಸ್ಥಾನದ ವೆಬ್‌ಸೈಟ್ ನ್ನು ಈ ಹಿಂದೆ ಮಾಡುವಾಗ ವನಜಾ ಭಟ್ ,ಮೋಹನ್ ರಾಮ್ ಸಮಿತಿಯಲ್ಲಿದ್ದರು ಈಗ ಅದು ಸರಿಯಿಲ್ಲ ಎಂದು ಹೇಳುತಿದ್ದಾರೆ. ಡಿಟ್ಟಂ ಪ್ರಕಾರ ಪೂಜೆ ನಡೆಯುತ್ತಿಲ್ಲ. ದಿವ್ಯಾಂಗ ಚೇತನರಿಗೆ, ವಯೋವೃದ್ದರಿಗಾಗಿ ತಂದ ವಾಹನ ಸೇವೆ ನೀಡುತ್ತಿಲ್ಲ. ಎಚ್ ಟಿ ಲೈನ್ ಇದ್ದರೂ ಅದರ ಕೆಳಗೆ ಗಿಡ ನೆಟ್ಟು ಅವೈಜ್ಞಾನಿಕತೆ ಪ್ರದರ್ಶಿಸಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಲೋಲಾಕ್ಷ, ಬಾಲಕೃಷ್ಣ ಮರೀಲ್, ಕೃಷ್ಣಮೂರ್ತಿ ಭಟ್, ಪವನ್, ಲಕ್ಷ್ಮೀ ಕಲ್ಲಪನೆ, ಶೋಬಿತ್ ಮತ್ತಿತರರು ಉಪಸ್ಥಿತರಿದ್ದರು.

 

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.