Breaking News

ಹಾಲೆಮಜಲು : ಸಂರಕ್ಷಣಾ ಕಾರ್ಯಕ್ರಮ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle


ಜೇಸಿಐ ಪಂಜ ಪಂಚ ಶ್ರೀ ಇದರ ವತಿಯಿಂದ ಸರಕಾರಿ ಶಾಲಾ ಪೋಷಣಾ ಅಭಿಯಾನ ಕಾರ್ಯಕ್ರಮದಡಿ ಅಂಗನವಾಡಿ ಕೇಂದ್ರಕ್ಕೆ ದಿನ ಬಳಕೆ ವಸ್ತುಗಳ ಕೊಡುಗೆ ಕಾರ್ಯಕ್ರಮ ಎ. ೨೩ರಂದು ಹಾಲೆಮಜಲು ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.
ಸಭಾಧ್ಯಕ್ಷತೆಯನ್ನು ಜೇಸಿ ಅಧ್ಯಕ್ಷ ಶಿವಪ್ರಸಾದ್ ಹಾಲೆಮಜಲು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗುತ್ತಿಗಾರಿನ ಅಕ್ಷಯ್ ಮೊಬೈಲ್ ಮಾಲಕ ಮದನ್ ಕೊಲ್ಯ, ಆದರ್ಶಯೂತ್ ಕ್ಲಬ್ ಹಾಲೆಮಜಲು ಇದರ ಅಧ್ಯಕ್ಷ ದಿನೇಶ್ ಹಾಲೆಮಜಲು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ತೇಜವತಿ. ಜೇಸಿ ಕಾರ್ಯಕ್ರಮ ನಿರ್ದೇಶಕರಾದ ಸುಪ್ರೀತ್ ಗುಡ್ಡೆಮನೆ ಉಪಸ್ಥಿತರಿದ್ದರು. ಗುತ್ತಿಗಾರು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಘಟಕದ ಶಾಖಾ ವ್ಯವಸ್ಥಾಪಕ ವಿಜಯ್ ವಾಲ್ತಾಜೆ ಹಾಗೂ ಮದನ್ ಕೊಲ್ಯ ರವರು ನೀಡಿದ ಫ್ಯಾನ್ ಹಾಗೂ ಚಯರ್‌ಗಳನ್ನು ಜೇಸಿ ಅಧ್ಯಕ್ಷ ಶಿವಪ್ರಸಾದ್ ಹಾಲೆಮಜಲು ಅಂಗನವಾಡಿ ಕೇಂದ್ರ ಸಹಾಯಕಿಯರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಶಿವಪ್ರಸಾದ ಸ್ವಾಗತಿಸಿ, ಕಾರ್ಯದರ್ಶಿ ಕೌಶಿಕ್ ಕುಳ ಧನ್ಯವಾದವಿತ್ತರು. ಅಂಗನವಾಡಿ ಶಾಲಾ ಮಕ್ಕಳು, ಪೋಷಕರು, ಆದರ್ಶ ಯೂತ್ ಕ್ಲಬ್‌ನ ಸದಸ್ಯರುಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.