ಅಮರ ಕ್ರೀಡಾ ಮತ್ತು ಕಲಾ ಸಂಘ ಬಡ್ಡಡ್ಕ ಇದರ ಆಶ್ರಯದಲ್ಲಿ ದಿ. ಎನ್.ಎ. ಸುಂದರ ಗೌಡ ನೆಡ್ಚಿಲು ಇವರ ಸ್ಮರಣಾರ್ಥ ಎನ್.ಎ.ಸುಂದರ ಗೌಡ ಮೆಮೋರಿಯಲ್ ಟ್ರೋಫಿ- 2022 ಕ್ರಿಕೆಟ್ ಪಂದ್ಯಾಟ ಬಡ್ಡಡ್ಕ ಶ್ರೀ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆದ ಪಂದ್ಯಾಟದ ಉದ್ಘಾಟನೆಯನ್ನು ಬಡ್ಡಡ್ಕ ರಾಮಕೃಷ್ಣ ಅನುದಾನಿತ ಪ್ರಾಥಮಿಕ ಶಾಲೆಯ ಸಂಚಾಲಕ ಡಾ.ಎನ್.ಎ.ಜ್ಞಾನೇಶ್ ಎ.23 ರಂದು ನೆರವೇರಿಸಿದರು. ಅಮರ ಕ್ರೀಡಾ ಕಲಾ ಸಂಘದ ಅಧ್ಯಕ್ಷ ವೆಂಕಟ್ರಮಣ ದೋಣಿಮೂಲೆ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಪಂ.ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು,ಉಪಾಧ್ಯಕ್ಷ ದಿನೇಶ್ ಕಣಕ್ಕೂರು,ಸದಸ್ಯರಾದ ಶಿವಾನಂದ ರಂಗತ್ತಮಲೆ, ಸತ್ಯಕುಮಾರ್ ಆಡಿಂಜ, ಭಾಗಿರತಿ ಪತ್ತುಕುಂಜ, ಶಶಿಕಲಾ ಧೋಣಿಮೂಲೆ, ಪಂ.ಮಾಜಿ ಅಧ್ಯಕ್ಷ ಹರೀಶ್ ರಂಗತ್ತಮಲೆ, ಸೊಸೈಟಿ ಮಾಜಿ ಉಪಾಧ್ಯಕ್ಷ ಎನ್.ಎ.ಜಯರಾಮ,ನಿರ್ದೇಶಕ ತಂಗವೇಲು ನಾಗಪಟ್ಟಣ, ಪ್ರಗತಿಪರ ಕೃಷಿಕ ತೀರ್ಥರಾಮ ನೆಡ್ಚಿಲು ಉಪಸ್ಥಿತರಿದ್ದರು. ವಿಖ್ಯಾತ್ ಬಾರ್ಪಣೆ ಸ್ವಾಗತಿಸಿ, ವಂದಿಸಿದರು. ಅಮರ ಕ್ರೀಡಾ ಕಲಾ ಸಂಘದ ಪದಾಧಿಕಾರಿಗಳು ಸಹಕರಿಸಿದರು.