ಫಲಾಪೇಕ್ಷೆಯಿಲ್ಲದೆ ಕರ್ತವ್ಯ ನಿರ್ವಹಿಸಿದಾಗ ಜೀವಮಾನದಲ್ಲಿ ಪರಮಾನಂದದ ಬದುಕು ಅನುಭವಿಸಲು ಸಾಧ್ಯವಿದೆ : ಪಿ.ವಿ.ರಾವ್
ಸುಳ್ಯ ಶ್ರೀ ಗುರು ರಾಘವೇಂದ್ರ ಮಠದ 4 ನೇ ವರ್ಷದ ಪ್ರತಿಷ್ಠಾ ವಾರ್ಷಿಕ ಮಹೋತ್ಸವದ ಪ್ರಯುಕ್ತ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀಹರಿ ಎಳಚಿತ್ತಾಯ ರವರ ಮಾರ್ಗದರ್ಶನದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು. ರಾತ್ರಿ ವಿಶೇಷವಾಗಿ ಆಶ್ಲೇಷಾ ಬಲಿ ಪೂಜೆ,ರಂಗ ಪೂಜೆಯಾಗಿ ಮಹಾ ಪೂಜೆ ನೆರವೇರಿತು. ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.
ಧಾರ್ಮಿಕ ಸಭೆ:
ಮಠದ ಆಡಳಿತ ಸಮಿತಿ ಅಧ್ಯಕ್ಷ ಶ್ರೀಕೃಷ್ಣ ಸೋಮಯಾಗಿ ಯವರ ಅಧ್ಯಕ್ಷತೆಯಲ್ಲಿ ಎ.22 ರಂದು ಧಾರ್ಮಿಕ ಸಭೆಯು ನಡೆಯಿತು.
ಮಂಗಳೂರು ಹರಿಕಥಾ ಪರಿಷತ್ ಕಾರ್ಯದರ್ಶಿ ಹರಿದಾಸ ಪಿ.ವಿ.ರಾವ್ ರವರು ಧಾರ್ಮಿಕ ಪ್ರವಚನ ನೆರವೇರಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ರೊ.ಪ್ರಭಾಕರನ್ ನಾಯರ್ ,ಮಠದ ಟ್ರಸ್ಟ್ ಗಳಾದ ಮುರಳೀಕೃಷ್ಣ , ಶ್ರೀಮತಿ ನಾರಾಯಣಿ ಕಲ್ಲೂರಾಯ ಉಪಸ್ಥಿತರಿದ್ದರು. ಶ್ರೀಮತಿ ಗಿರಿಜಾ ಎಂ.ವಿ. ಪ್ರಾರ್ಥಿಸಿದರು. ಟ್ರಸ್ಟ್ ಸಂಚಾಲಕ ಪ್ರಕಾಶ್ ಮೂಡಿತ್ತಾಯ ಸ್ವಾಗತಿಸಿದರು. ಚೊಕ್ಕಾಡಿ ಸೊಸೈಟಿ ಉಪಾಧ್ಯಕ್ಷ ಪ್ರವೀಣ್ ಎಸ್.ರಾವ್ ವಂದಿಸಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸುಳ್ಯ ಶಿಕ್ಷಕರ ಯಕ್ಷಗಾನ ಒಕ್ಕೂಟ , ಬೃಂದಾವನ ಚಾರಿಟೇಬಲ್ ಟ್ರಸ್ಟ್,ತೆಂಕುತಿಟ್ಟಿನ ಮಕ್ಕಳ ತಂಡಗಳ ಯಕ್ಷ ಕಾರಂಜಿ 2022 ಯಕ್ಷಗಾನ ಸ್ಪರ್ಧೆಯು ನಡೆಯಿತು. ಮಂಡಕೋಲು ಮಹಾವಿಷ್ಣು ತಂಡದ ಭಾರ್ಗವ ವಿಜಯ, ಯಕ್ಷ ರಂಗ ಬೆಳ್ಳಾರೆ ಜಾಂಬವತಿ ಕಲ್ಯಾಣ, ಕಾಸರಗೋಡು ಗಡಿನಾಡ ಕಲಾವಿದರು ಏಕಾದಶೀ ಮಹಾತ್ಮೆ, ಸುರತ್ಕಲ್ ಸಿದ್ದಿವಿನಾಯಕ ಕಲಾ ಕೇಂದ್ರ ಸುದರ್ಶನ ವಿಜಯ ಎಂಬ ಪ್ರಸಂಗಗಳು ಪ್ರದರ್ಶನಗೊಂಡಿತು.
ಪ್ರಥಮ ಬಹುಮಾನ ಸುರತ್ಕಲ್ ,ದ್ವಿತೀಯ ಕಾಸರಗೋಡು, ತೃತೀಯ ಬೆಳ್ಳಾರೆ, ಚತುರ್ಥ ಮಂಡೆಕೋಲು ತಂಡಗಳು ಪಡೆದುಕೊಂಡಿತು. ನಗದು ಹಾಗೂ ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರವನ್ನು ವಿಜೇತ ತಂಡಗಳಿಗೆ ನೀಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಕೃಷ್ಣ ಸೋಮಯಾಗಿ ವಹಿಸಿದ್ದರು. ಸ್ಪರ್ಧೆಯ ನಿರ್ಣಾಯಕರಾಗಿ ವೆಂಕಟ್ರಾಮ ಭಟ್ ಸುಳ್ಯ, ಉಮೇಶ್ ಶೆಟ್ಟಿ ಉಬರಡ್ಕ, ಶಿಕ್ಷಕರ ಯಕ್ಷಗಾನ ಒಕ್ಕೂಟದ ಅಧ್ಯಕ್ಷ ಲಿಂಗಪ್ಪ ಬೆಳ್ಳಾರೆ ವೇದಿಕೆಯಲ್ಲಿದ್ದರು.ಟ್ರಸ್ಟ್ ಸಂಚಾಲಕ ಪ್ರಕಾಶ್ ಮೂಡಿತ್ತಾಯ ಪ್ರಶಸ್ತಿ ವಿಜೇತ ತಂಡದ ಪಟ್ಟಿ ವಾಚಿಸಿದರು.ರೋಟರಿ ಶಾಲೆಯ ಮುಖ್ಯ ಶಿಕ್ಷಕ ಅಚ್ಚುತ ಅಟ್ಲೂರು ಸ್ವಾಗತಿಸಿ,ವಂದಿಸಿದರು.