ಸುಳ್ಯ ಕ್ರೀಡಾಭಾರತಿ ಘಟಕದ ಹಾಗೂ ವಿವೇಕಾನಂದ ವಿದ್ಯಾಸಂಸ್ಥೆ ವಿನೋಬನಗರ ಸಹಯೋಗದಲ್ಲಿ ಎರಡು ದಿನಗಳ ಉಚಿತ ತ್ರೋಬಾಲ್ ತರಬೇತಿ ಶಿಬಿರವು ಜಾಲ್ಸೂರು ಗ್ರಾಮದ ವಿವೇಕಾನಂದ ವಿದ್ಯಾಸಂಸ್ಥೆಯ ವಠಾರದಲ್ಲಿ ಎ.22 ಹಾಗೂ 23ರಂದು ನಡೆಯಿತು.
ಎ.22ರಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಭಾರತಿ ಅಧ್ಯಕ್ಷ ಎ.ಸಿ. ವಸಂತ ಅಮಾಚೂರು ಅಧ್ಯಕ್ಷತೆ ವಹಿಸಿದ್ದರು. ವಿನೋಬನಗರ ವಿವೇಕಾನಂದ ವಿದ್ಯಾಸಂಸ್ಥೆಯ ಸಂಚಾಲಕ ಸುಧಾಕರ ಕಾಮತ್ ಉದ್ಘಾಟಿಸಿ, ಶುಭಹಾರೈಸಿದರು. ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಯ ಗೌರವ ಸಲಹೆಗಾರ ನ. ಸೀತಾರಾಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಒಕ್ಕಲಿಗ ಗೌಡ ಸಂಘದ ತರುಣ ಘಟಕದ ಅಧ್ಯಕ್ಷ ಅಕ್ಷಯ್ ಕೆ.ಸಿ., ವಿವೇಕಾನಂದ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಗಿರೀಶ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಜಯಪ್ರಸಾದ್ ಕಾರಿಂಜ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ತ್ರೋಬಾಲ್ ತರಬೇತಿ ಶಿಬಿರದಲ್ಲಿ ಉತ್ತಮ ತರಬೇತುದಾರರಿಂದ ತರಬೇತಿ ನೀಡಲಾಗಿದ್ದು, ಸುಳ್ಯ ತಾಲೂಕಿನ ಯುವತಿ ಮಂಡಲಗಳು ಹಾಗೂ ಆಸಕ್ತ ಕ್ರೀಡಾಪಟುಗಳು ಸೇರಿದಂತೆ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಎ.23ರಂದು ಅಪರಾಹ್ನ ಜರುಗಿದ ಸಮಾರೋಪ ಸಮಾರಂಭದಲ್ಲಿ ಕ್ರೀಡಾಭಾರತಿ ಅಧ್ಯಕ್ಷ ಎ.ಸಿ. ವಸಂತ ಅಧ್ಯಕ್ಷತೆ ವಹಿಸಿದ್ದರು. ವಿವೇಕಾನಂದ ವಿದ್ಯಾಸಂಸ್ಥೆಯ ಗೌರವ ಸಲಹೆಗಾರ ನ. ಸೀತಾರಾಮ, ಕ್ರೀಡಾಭಾರತಿ ಉಪಾಧ್ಯಕ್ಷ ಹಾಗೂ ಶಿಬಿರದ ನಿರ್ದೇಶಕ ಶರತ್ ಅಡ್ಕಾರು, ಶಿಬಿರದ ಮತ್ತೋರ್ವ ನಿರ್ದೇಶಕ ಹರಿಪ್ರಕಾಶ್ ಅಡ್ಕಾರು, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಪುರುಷೋತ್ತಮ ಪದಕನ್ನಾಯ, ಕ್ರೀಡಾಭಾರತಿ ಕಾರ್ಯದರ್ಶಿ ರಂಗನಾಥ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಜಯಪ್ರಸಾದ್ ಕಾರಿಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಪುರುಷೋತ್ತಮ ಪದಕನ್ನಾಯ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾಭಾರತಿ ಉಪಾಧ್ಯಕ್ಷ ಶರತ್ ಅಡ್ಕಾರು ಸ್ವಾಗತಿಸಿ, ಕಾರ್ಯದರ್ಶಿ ರಂಗನಾಥ್ ವಂದಿಸಿದರು.