ಐವರ್ನಾಡು ಗ್ರಾಮದ ವಸಂತ ಗೌಡ ಕುಳ್ಳಂಪಾಡಿಯವರು ಎ.13 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠ ಸಮಾರಾಧನೆಯು ಎ.23 ರಂದು ಕುಳ್ಳಂಪಾಡಿ ಮನೆಯಲ್ಲಿ ನಡೆಯಿತು.
ನಿವೃತ್ತ ಶಿಕ್ಷಕ ಚಿದಾನಂದರವರು ದಿ.ವಸಂತ ಗೌಡರ ಆದರ್ಶ ಗುಣಗಳನ್ನು ನೆನಪಿಸಿ ನುಡಿನಮನ ಸಲ್ಲಿಸಿದರು.
ಆಗಮಿಸಿದ ನೂರಾರು ಜನ ಗಣ್ಯರು ವಸಂತ ಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ
ದಿ.ವಸಂತ ಗೌಡರ ಪತ್ನಿ ಶ್ರೀಮತಿ ವಸಂತಿ, ಮಕ್ಕಳು, ಸಹೋದರರು, ಸಹೋದರಿಯರು, ನಾದಿನಿಯರು, ಬಾವಂದಿರು, ಅಳಿಯಂದಿರು,ಮೊಮ್ಮಕ್ಕಳು,ಕುಟುಂಬಸ್ಥರು ಉಪಸ್ಥಿತರಿದ್ದರು.