ಧಾರ್ಮಿಕ ಕಾರ್ಯಕ್ರಮ ದಲ್ಲಿ ಸೇರುವುದರಿಂದ ಸಂಸ್ಕಾರ ವೃದ್ಧಿಸುವುದು, ದೈವರಾಧನೆಯಿಂದ ಮನುಷ್ಯನು ಕೃತಾರ್ಥರಾಗಲು ಸಾಧ್ಯ- ಎಡನೀರು ಶ್ರೀ
ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ವಿಷ್ಣುನಗರ ಶ್ರೀವಿಷ್ಣುಮೂರ್ತಿ ಶ್ರೀ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ದೈವಸ್ಥಾನದ ನವೀಕರಣ ಪುನಃ ಪ್ರತಿಷ್ಠಾ ಕಲಶಾಭಿಷೇಕ ಹಾಗೂ ದೈವಗಳ ಜಾತ್ರಾ ಮಹೋತ್ಸವದಂದು ಧಾರ್ಮಿಕ ಸಭೆಯು ನಡೆಯಿತು. ಮೀನುಗಾರಿಕೆ ಬಂದರು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ರವರ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಶ್ರೀಮದ್ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ತೋಟಕಾಚಾರ್ಯ ಸಂಸ್ಥಾನ ಎಡನೀರು ಮಠದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳವರು ಆಶೀರ್ವಚನ ನೀಡಿದರು.ಯಕ್ಷಗಾನ ಅರ್ಥದಾರಿ
ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ಟ ಬಾಯಾರು ಧಾರ್ಮಿಕ ಪ್ರವಚನ ಮಾಡಿದರು. ವೇದಿಕೆಯಲ್ಲಿ ಅಮರಮುಡ್ನೂರು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪದ್ಮಪ್ರಿಯಾ ಮೇಲ್ತೋಟ, ವಾಸ್ತುತಜ್ಞ ಕೃಷ್ಣಪ್ರಸಾದ್ ಮುನಿಯಂಗಳ , ಆಡಳಿತ ಸಮಿತಿ ವ್ಯವಸ್ಥಾಪಕ ಯಂ.ಜಿ.ಸತ್ಯನಾರಾಯಣ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಘವೇಂದ್ರ ಪುಳಿಮಾರಡ್ಕ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದೈವಜ್ಞ ಪ್ರವೀಣ್ ತಂತ್ರಿ ಕೋಟೆ ಕಟಪಾಡಿ, ನೀಲೇಶ್ವರ ಪದ್ಮನಾಭ ತಂತ್ರಿ, ವಾಸ್ತು ತಜ್ಞ ಕೃಷ್ಣ ಪ್ರಸಾದ್ ಮುನಿಯಂಗಳ, ಪ್ರಸನ್ನ ಮುಳಿಯಾಲ, ಕಾಷ್ಠ ಶಿಲ್ಪಿ ಜನಾರ್ದನ ಆಚಾರ್ಯ ಕುಂಟಿಕಾನ, ಕೆಂಪುಕಲ್ಲಿನ ಮೇಸ್ತ್ರಿ ವಿಶ್ವನಾಥ ಮೇಸ್ತ್ರಿ ನರ್ಕಳ,ಆನಂದ ಆಚಾರ್ಯ ರವರನ್ನು ಗೌರವಿಸಲಾಯಿತು.
ಶ್ರೀಮತಿ ಸರೋಜ ಮತ್ತು ಕು.ಅನುಜ್ಞಾ ಪ್ರಾರ್ಥಿಸಿದರು. ವ್ಯವಸ್ಥಾಪಕ ಯಂ.ಜಿ.ಸತ್ಯನಾರಾಯಣ ಸ್ವಾಗತಿಸಿದರು. ರಾಧಾಕೃಷ್ಣ ಬೊಳ್ಳೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಘವೇಂದ್ರ ಪಿ.ಕೆ ವಂದಿಸಿದರು. ದಯಾನಂದ ಪತ್ತುಕುಂಜ ಮತ್ತು ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಂಜೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರ ಪಿಲಿಕಜೆ ಕುಕ್ಕುಜಡ್ಕದ ಸದಸ್ಯರು ಭಜನಾ ಕಾರ್ಯಕ್ರಮವನ್ನು ನೆರವೇರಿಸಿದರು.
ಬಳಿಕ ತಂತ್ರಿಯವರಿಂದ
ವೈದಿಕ ಕಾರ್ಯಕ್ರಮಗಳು
ಅಧಿವಾಸ ಹೋಮ, ಕಲಶ ಪೂಜೆ, ಧಾನ್ಯಾಧಿವಾಸ, ತ್ರಿಕಾಲ ಪೂಜೆ ರಾತ್ರಿ ಪೂಜೆಯು ನಡೆಯಿತು. ಆಗಮಿಸಿದ ಭಕ್ತಾದಿಗಳಿಗೆ ರಾತ್ರಿ ಅನ್ನ ಸಂತರ್ಪಣೆ ನಡೆಯಿತು.