ಸುಳ್ಯದ ಮೊಗರ್ಪಣೆ ಮಸೀದಿ ಬಳಿ ಹಳೆ ಸೇತುವೆಯ ಮುಂಭಾಗ ಕಳೆದ 9 ದಿನಗಳಿಂದ ka19 AB 6833 ನಂಬರಿನ ಆಟೋರಿಕ್ಷಾ ನಿಂತಿದ್ದು ಅದರ ವಾರೀಸುದಾರರು ಯಾರೆಂದು ತಿಳಿದಿರುವುದಿಲ್ಲ.
ಆಟೋರಿಕ್ಷದ ಮುಂಭಾಗದಲ್ಲಿ ಸಿಎಂ ಮಡವೂರು, ಹಾಗೂ ನಿಶಾ ಎಂಬ ಹೆಸರನ್ನು ಬರೆಯಲಾಗಿದೆ.
ಇದೀಗ ಆಟೋರಿಕ್ಷಾವನ್ನು ಸ್ಥಳೀಯ ಯುವಕರು ರಸ್ತೆ ಪಕ್ಕದಿಂದ ಹಳೆ ಸೇತುವೆಯ ಬದಿ ತಳ್ಳಿ ನಿಲ್ಲಿಸಿದ್ದಾರೆ.
ಆಟೋ ರಿಕ್ಷಾದಲ್ಲಿ ಇರುವ ದೂರವಾಣಿ ಸಂಖ್ಯೆಗೆ ಫೋನ್ ಮಾಡಿದರೆ ಫೋನ್ ಸ್ವೀಕಸುತ್ತಿಲ್ಲ ಎಂದು ತಿಳಿದುಬಂದಿದೆ.