ಆಲೆಟ್ಟಿ ಗ್ರಾಮದ ನಾಗಪಟ್ಟಣ ನಿವಾಸಿ ರಾಧಾ ಜಿ. ಎಂಬವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಡಯಾಲಿಸಿಸ್ ವಾರದಲ್ಲಿ ಮೂರು ಬಾರಿ ಮಾಡಬೇಕಾಗುತ್ತದೆ.ಇದಕ್ಕೆ ತುಂಬಾ ಹಣ ಖರ್ಚಾಗುತ್ತದೆ ಎಂದು ಹೇಳಿ ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಸಹಾಯ ಮಾಡಿ ಎಂದು ಕೋರಿ ಸಂಘಟನೆಗೆ ಮನವಿ ನೀಡಿದ್ದರು.
ಆ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆಯವರು ಬಡ ರೋಗಿ ಮಹಿಳೆಗೆ ಸಹಕಾರ ಮಾಡುವಂತೆ ಮುತ್ತೂಟ್ ಫೈನಾನ್ಸ್ ಸುಳ್ಯ ಶಾಖೆಗೆ ಮನವಿ ಪತ್ರ ನೀಡಿದ್ದು ಮನವಿಗೆ ಸ್ಪಂದಿಸಿ ಏಪ್ರಿಲ್ 24ರಂದು ಮುತ್ತೂಟ್ ಫೈನಾನ್ಸ್ ಸಂಸ್ಥೆಯ ಮ್ಯಾನೇಜರ್ ತೇಜಸ್. ಮತ್ತು ಸೆಕ್ಷನ್ ಮೆನೇಜರ್ ಸಂದೇಶ್ ಶೆಣೈಯವರು ರಾಧಾ ರವರ ಮನೆಗೆ ಪಿ.ಸುಂದರ ಪಾಟಾಜೆಯವರೊಂದಿಗೆ ಭೇಟಿನೀಡಿ ರಾಧಾ ರವರಿಗೆ ಸಹಾಯಧನದ ಚೆಕ್ ನೀಡಿ ಚಿಕಿತ್ಸೆಗೆ ಸ್ಪಂದನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪಿ.ಸುಂದರ ಪಾಟಾಜೆಯವರು ಮುತ್ತೂಟ್ ಫೈನಾನ್ಸ್ ಅವರಿಗೆ ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಅಭಿನಂದನೆಗಳು ಹೇಳಿ ಇದರಿಂದ ಬಡ ಕುಟುಂಬದವರಿಗೆ ತುಂಬಾ ಅನುಕೂಲವಾಗಿದೆ ಇನ್ನು ಮುಂದೆ ಕೂಡ ಫೈನಾನ್ಸ್ ಸಂಸ್ಥೆಯಿಂದ ಬಡ ರೋಗಿಗಳಿಗೆ ಸಹಕಾರ ನೀಡುವಂತೆ ಕೇಳಿಕೊಂಡರು.