ಸುಳ್ಯ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಮತ್ತು ಸುಳ್ಯ ರೇಂಜ್ ಮದ್ರಸಾ ಮೆನೇಜ್ಮೆಂಟ್ ವತಿಯಿಂದ ರಂಜಾನ್ ಕಿಟ್ ವಿತರಣಾ ಸಮಾರಂಭ ಸುಳ್ಯ ಸುನ್ನಿ ಮಹಲ್ ನಲ್ಲಿ ನಡೆಯಿತು. ಸಭಾಧ್ಯಕ್ಷತೆಯನ್ನು ಮುಫತ್ತಿಶ್ ಉಮರುಲ್ ಫಾರೂಕ್ ದಾರಿಮಿ ವಹಿಸಿದರು. ಅಬ್ದುಲ್ ಖಾದರ್ ಫೈಝಿ ಐವರ್ನಾಡುರವರು ಕಾರ್ಯಕ್ರಮ ಉದ್ಘಾಟಿಸಿದರು. ಮೇನೇಜ್ ಮೆಂಟ್ ಅಧ್ಯಕ್ಷರಾದ ತಾಜ್ ಮುಹಮ್ಮದ್ ಕಲ್ಲುಗುಂಡಿಯವರ ನೇತೃತ್ವದಲ್ಲಿ ರೇಂಜ್ ವ್ಯಾಪ್ತಿಯ 42 ಅಧ್ಯಾಪಕರಿಗೆ ರಂಝಾನ್ ಕಿಟ್ ವ್ಯವಸ್ಥೆ ಮಾಡಲಾಯಿತು. ಸಭೆಯಲ್ಲಿ ಮದ್ರಸಾ ಮೆನೇಜ್ಮೆಂಟ್ ಕೋಶಾಧಿಕಾರಿ ಹಮೀದ್ ಹಾಜಿ, ಜಂಇಯ್ಯತುಲ್ ಮುಅಲ್ಲಿಮೀನ್ ಕೋಶಾಧಿಕಾರಿ ಧರ್ಮತ್ತಣ್ಣಿ ಹಸೈನಾರ್, ಎಸ್ ಎಂ ಎಫ್ ಅಧ್ಯಕ್ಷ ರಾದ ಕತ್ತರ್ ಇಬ್ರಾಹಿಂ ಹಾಜಿ ಉಪಸ್ಥಿತರಿದ್ದರು. ಜಂಇಯ್ಯತುಲ್ ಮುಅಲ್ಲಿಮೀನ್ ಕಾರ್ಯದರ್ಶಿ ಮಹಮ್ಮದ್ ಮುಸ್ಲಿಯಾರ್ ಮುಂಡೋಳೆ ಸ್ವಾಗತಿಸಿ ಮೆನೇಜ್ಮೆಂಟ್ ಕಾರ್ಯದರ್ಶಿ ಯು.ಪಿ.ಬಶೀರ್ ಬೆಳ್ಳಾರೆ ವಂದಿಸಿದರು.