Breaking News

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿಯಾಗಿ ಅಕ್ಷಯ್ ಕೆ.ಸಿ.ಯವರನ್ನು ನೇಮಿಸಿದ ನಿರ್ಣಯಕ್ಕೆ ಕೋರ್ಟ್ ತಡೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಪ್ರಧಾನ ಕಾರ್ಯದರ್ಶಿಯಾಗಿ ಡಾ.ರೇಣುಕಾಪ್ರಸಾದ್ ಕೆ.ವಿ. ಅಬಾಧಿತವಾಗಿ ಮುಂದುವರಿಕೆ

ಅಕಾಡೆಮಿ ಪತ್ರಿಕಾ ಹೇಳಿಕೆ

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಡಾ.ರೇಣುಕಾಪ್ರಸಾದ್ ಕೆ.ವಿ.ಯವರನ್ನು ಬದಲಾಯಿಸಿ ಅಕ್ಷಯ್ ಕೆ.ಸಿ.ಯವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದ ಹಾಗೂ ಅಕ್ಷಯ್ ಕೆ.ಸಿ., ಡಾ.ಐಶ್ವರ್ಯ ಕೆ.ಸಿ. ಮತ್ತು ಡಾ. ಗೌತಮ್ ಗೌಡ ಎ.ಜಿ.ಯವರುಗಳನ್ನು ಕಾಡೆಮಿ ನಿರ್ದೇಶಕರುಗಳೆಂದು ನೇಮಿಸಿದ ನಿರ್ಣಯಗಳಿಗೆ ಸುಳ್ಯದ ಹಿರಿಯ ಸಿವಿಲ್ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ.
ಈ ಬಗ್ಗೆ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಹೆಸರಲ್ಲಿ ಡಾ. ರೇಣುಕಾಪ್ರಸಾದ್ ಕೆ.ವಿ. ಹಾಗೂ ನ್ಯಾಯವಾದಿಗಳಾದ ಜಿ.ಆರ್.ರವಿಶಂಕರ್ ಮತ್ತು ಶ್ರೀಹರಿರಾವ್‌ರವರುಗಳು ನ್ಯಾಯಾಲಯದ ಆದೇಶ ಪ್ರತಿಯೊಂದಿಗೆ ಹೇಳಿಕೆ ನೀಡಿದ್ದಾರೆ.

“ಡಾ ರೇಣುಕಾಪ್ರಸಾದ್ ಕೆ. ವಿ. ಯವರು ಅವರ ತಂದೆಯವರಾದ ದಿ. ಪೂಜ್ಯ ಡಾ. ಕುರುಂಜಿ ವೆಂಕಟ್ರಮಣ ಗೌಡರ ಅಣತಿಯಂತೆ ಸಾರ್ವಜನಿಕ ಹಿತಕ್ಕಾಗಿ ಮತ್ತು ಸಂಸ್ಥೆ ಯ ಫಲಾನುಭವಿಗಳ ಸೇವೆಗಾಗಿ ದಶಕಗಳಿಂದ ಇಂದಿನವರೆಗೂ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ವಿ ಸುಳ್ಯ ಇದರ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದು, ಅವರ ಸೇವಾ ಮನೋಭಾವವನ್ನು ಮೆಚ್ಚಿದ ಜನ ಇತ್ತೀಚೆಗೆ ಅವರನ್ನು ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳಿಂದ ಗೆಲ್ಲಿಸಿ ರಾಜ್ಯ ಉಪಾಧ್ಯಕ್ಷರಾಗಿ ಚುನಾಯಿತರಾಗಲು ಸಹಕರಿಸಿರುತ್ತಾರೆ. ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಇದರ ಕಾರ್ಯಚಟುವಟಿಕೆ ಪಾರದರ್ಶಕವಾಗಿ ಮತ್ತು ಉನ್ನತವಾಗಿರಲೆಂದು ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾಪ್ರಸಾದ್ ಕೆ.ವಿ.ಯವರು ಇತ್ತೀಚೆಗೆ ಸುಮಾರು ಮೂವತ್ತಕ್ಕೂ ಹೆಚ್ಚು ಜನ ಸೇವಾ ಧೀಮಂತರನ್ನು ಏ ಓ ಎಲ್ ಇ (ರಿ.) ಸಂಸ್ಥೆಯ ಕಾರ್ಯಕಾರಿ ಮಂಡಳಿಗಳಿಗೆ ನಾಮನಿರ್ದೇಶನ ಮಾಡಿ ಅವರೆಲ್ಲರ ಸಹಾಯಹಸ್ತದಿಂದ ಸಂಸ್ಥೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರಗತಿಪಥದಲ್ಲಿ ಒಯ್ಯಲು ಕ್ರಮ ವಹಿಸಿರುತ್ತಾರೆ.
ಆದರೆ ಡಾ. ರೇಣುಕಾ ಪ್ರಸಾದ್ ರವರ ಪಾರದರ್ಶಕತೆ ಮತ್ತು ನಿಸ್ವಾರ್ಥತೆಯನ್ನು ಸಹಿಸದ ಸಂಸ್ಥೆಯ ಅಧ್ಯಕ್ಷರು ಮತ್ತು ಅವರ ಬಳಗ ಡಾ ರೇಣುಕಾಪ್ರಸಾದ್ ಕೆ. ವಿ. ಯವರನ್ನು ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ತೆಗೆಯಲು ಮುಂದಾಗಿದ್ದು, ಮತ್ತು ಅವರ ಅನುಪಸ್ಥಿತಿಯಲ್ಲಿ ಸಂಸ್ಥೆಯನ್ನು ಖಾಸಗಿ ಆಸ್ತಿಯಂತೆ ಮಾರ್ಪಡಿಸಲು ಹವಣಿಸುತ್ತಿದ್ದ ಹಿನ್ನೆಲೆಯಲ್ಲಿ ಏ ಓ ಎಲ್ ಇ (ರಿ.) ಸಂಸ್ಥೆ ಮತ್ತು ಡಾ ರೇಣುಕಾಪ್ರಸಾದ್ ಕೆ.ವಿ.ಯವರು ಮಾನ್ಯ ನ್ಯಾಯಾಲಯದಲ್ಲಿ ಸೂಕ್ತ ಪರಿಹಾರ ಆದೇಶ ಕೋರಿ ದಾವೆ ಸಲ್ಲಿಸಿದ್ದು, ಸದರಿ ದಾವೆಯಲ್ಲಿ ಹೊರಡಿಸಿದ ಕೆಲವು ಆದೇಶಗಳನ್ನು ಪ್ರಶ್ನಿಸಿ ಡಾ.ರೇಣುಕಾಪ್ರಸಾದ್ ಕೆ.ವಿ. ಮತ್ತು ಸಂಸ್ಥೆಯ ವಿರೋಧಿ ಬಣದವರು ಈಗಾಗಲೇ ಉಚ್ಛ ನ್ಯಾಯಾಲಯದಲ್ಲಿ ಅಫೀಲು ಹೂಡಿದ್ದು, ಅಪೀಲು ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿ ಸಂಸ್ಥೆಯ ಮೂಲ ಸ್ವರೂಪ ಸಂಸ್ಥೆಯ ಸಂವಿಧಾನದ ಧ್ಯೇಯೋದ್ದೇಶಗಳನ್ನು ಬದಲಿಸಿ ಸ್ವಾರ್ಥಪರ ಉದ್ದೇಶಗಳಿಂದ ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾಪ್ರಸಾದ್ ಕೆ.ವಿ. ಯವರನ್ನು ಸ್ಥಾನಾಂತರ ಮಾಡಿ ಸಂಸ್ಥೆಯನ್ನು ಖಾಸಗೀಕರಿಸುವ ರೀತಿಯಲ್ಲಿ ಮಾರ್ಪಡಿಸುವ ಸಲುವಾಗಿ ವಿಧಿ ವಿರುದ್ಧವಾಗಿ ಕೆಲವು ಸಭೆಗಳನ್ನು ನಡೆಸಿ ಹಲವು ಠರಾವುಗಳನ್ನು ಅಕ್ರಮವಾಗಿ ಮಾಡಿದುದರ ವಿರುದ್ಧ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ಈಗಾಗಲೇ ನ್ಯಾಯಾಲಯ ನಿಂದನಾ ಪ್ರಕರಣದ ನೋಟಿಸು ನೀಡಿದ್ದು, ಅದಕ್ಕನುಗುಣವಾಗಿ ಮಾನ್ಯ ನ್ಯಾಯಾಲಯ ಸುಳ್ಯ ಇಲ್ಲಿಂದ O.S. No.12/2021 ರಲ್ಲಿ ದಿನಾಂಕ 21.04.2022 ರಂದು ಆದೇಶ ಪ್ರಕಟವಾಗಿದ್ದು, ಸದ್ರಿ ಅದೇಶದಂತೆ ಪ್ರತಿವಾದಿಗಳಾದ ಶ್ರೀ ಡಾ. ಕೆ.ವಿ. ಚಿದಾನಂದ, ಶ್ರೀ ಕೆ.ವಿ.ಹೇಮನಾಥ್, ಶ್ರೀಮತಿ ಶೋಭಾ ಚಿದಾನಂದರವರುಗಳು ಅಕ್ರಮವಾಗಿ ನಡೆಸಿದ ಸಭೆಗಳು ಮತ್ತು ಅವುಗಳ ಎಲ್ಲ ಠರಾವುಗಳು (ಅಕ್ರಮವಾಗಿ ಪ್ರತಿವಾದಿ ಶ್ರೀ ಅಕ್ಷಯ್ ಕೆ.ಸಿ.ಯವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದ ಮತ್ತು ಶ್ರೀ ಅಕ್ಷಯ್ ಕೆ.ಸಿ., ಡಾ. ಐಶ್ವರ್ಯ ಕೆ.ಸಿ. ಮತ್ತು ಡಾ. ಗೌತಮ್ ಗೌಡ ಎ.ಜಿ. ರವರುಗಳನ್ನು ಸದಸ್ಯರು ಮತ್ತು ನಿರ್ದೇಶಕರುಗಳೆಂದು ನೇಮಿಸಿದ ಠರಾವುಗಳನ್ನು ಒಳಗೊಂಡು) ನ್ಯಾಯಾಲಯದ ದಾವೆ ಮುಗಿಯುವವರೆಗೂ ತಡೆ /ನಿಲುಗಡೆಯಾಗಿರುತ್ತದೆ. ಹಾಗಾಗಿ ಡಾ. ರೇಣುಕಾಪ್ರಸಾದ್ ಕೆ.ವಿ. ಯವರು ಏ ಓ ಎಲ್ ಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಅಬಾಧಿತವಾಗಿ ಮುಂದುವರಿದಿರುತ್ತಾರೆ. ಮತ್ತು ಸಂಸ್ಥೆಯ ಮುಖ್ಯ ಕಾರ್ಯಾಧಿಕಾರಿಯಾಗಿರುತ್ತಾರೆ. ಹಾಗಾಗಿ ಎಓಎಲ್‌ಇ (ರಿ.) ಸುಳ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಶ್ರೀ ಅಕ್ಷಯ್ ಕೆ. ಸಿ., ಶ್ರೀ ಕೆ.ವಿ. ಹೇಮನಾಥ್ ಅಥವಾ ಇತರೆ ಯಾರಾದರೂ ತಪ್ಪು ಘೋಷಣೆ ಅಥವಾ ಪ್ರಕಟಣೆ ಮಾಡಿದ್ದಲ್ಲಿ ಅದು ವಿಧಿವಿರುದ್ಧ ಮತ್ತು ಅಕ್ರಮ ಎಂದು ಗ್ರಹಿಸಬೇಕಾಗಿ ಸಾರ್ವಜನಿಕರಲ್ಲಿ ವಿನಂತಿ” ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.