ಸ್ಮರಣ ಸಂಚಿಕೆ ಬಿಡುಗಡೆ, ಶೈಕ್ಷಣಿಕ ವಿಚಾರಗೋಷ್ಠಿ, ಸಾಂಸ್ಕೃತಿಕ ಸಂಭ್ರಮ
ಅಮರಮೂಡ್ನೂರು ಗ್ರಾಮದ ಪೈಲಾರು ದ.ಕ.ಜಿ.ಪ.ಹಿ.ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಮೆ.1 ರಂದು ಶಾಲೆಯ ಆವರಣದಲ್ಲಿ ನಡೆಯಲಿರುವುದು.
ಬೆಳಗ್ಗೆ ಉದ್ಘಾಟನಾ ಸಮಾರಂಭವು ಶ್ರೀಮತಿ ಪದ್ಮಪ್ರಿಯ ಮೇಲ್ತೋಟ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಡಾ ಕೆ . ವಿ . ಚಿದಾನಂದ ಉದ್ಘಾಟಿಸಲಿರುವರು. ನೂರು ಹೆಜ್ಜೆ ಸ್ಮರಣ ಸಂಚಿಕೆಯನ್ನು ಬಾಲಸುಬ್ರಹ್ಮಣ್ಯ ಕಂಜರ್ಪಣೆ ಬಿಡುಗಡೆ ಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಿವಾಕರ ಪೈಲಾರು, ಶ್ರೀಮತಿ ದಿವ್ಯಮಡಪ್ಪಾಾಡಿ , ರಾಧಾಕೃಷ್ಣ ಬೊಳ್ಳೂರು, ಶ್ರೀಮತಿ ಕೆ . ಎಲ್ . ಪಾರ್ವತಿ ಕಡಪಳ ( ಬೊಳುಬೈಲು ) ಶ್ರೀಮತಿ ಶೀತಲ್, ಸಂತೋಷ್ ,ಜಯರಾಮ ಗುಡ್ಡೆಮನೆ, ಶ್ರೀಧರ ಕೆರೆಮೂಲೆ,ಯೋಗೀಶ್ ಮಾಡಬಾಕಿಲು ರವರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರುಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷತೆ ನಳಿನ್ ಕುಮಾರ್ ಕೋಡ್ತುಗುಳಿ ವಹಿಸಲಿರುವರು. ವಾಸುದೇವ ಗೌಡ ಪಡ್ಪು ಸನ್ಮಾನ ನೆರವೇರಿಲಿಸಲಿದ್ದಾರೆ.
ವಿಶೇಷ ಆಹ್ವಾಾನಿತರಾಗಿ ಕಂಬಳ ಆನಂದ ಗೌಡ, ಪಿ. ಜಿ. ಅಂಬೆಕಲ್ಲು , ರಾಘವ ಗೌಡ ಕಡಪಳ ಉಪಸ್ಥಿತರಿರುತ್ತಾರೆ.
ಶೈಕ್ಷಣಿಕ ವಿಚಾರಗೋಷ್ಠಿಯು ಮಧ್ಯಾಹ್ನ ಗಂಟೆ 2.00 ರಿಂದ ನಡೆಯಲಿದೆ. ಸೀತಾರಾಮ ಕೇವಳ ಅಧ್ಯಕ್ಷತೆ ವಹಿಸಲಿದ್ದಾರೆ. ಅರವಿಂದ ಚೊಕ್ಕಾಾಡಿ, ಶ್ರೀಮತಿ ಪೂರ್ಣಿಮಾ ಭಾಗವಹಿಸಲಿರುವರು.
ಸಮಾರೋಪ ಸಮಾರಂಭ ಸಂಜೆ ಗಂಟೆ 5-30 ರಿಂದ ಸಚಿವ ಎಸ್. ಅಂಗಾರ ರವರ ಅಧ್ಯಕ್ಷ ತೆಯಲ್ಲಿ ನಡೆಯಲಿದೆ.
ಮುಖ್ಯ ಭಾಷಣಕಾರರಾಗಿ ಸ್ಮಿತೇಶ್ ಬಾರ್ಯ ಚಲನಚಿತ್ರ ನಿರ್ದೇಶಕರು, ಮುಖ್ಯ ಅತಿಥಿಗಳಾಗಿ ಕೃಷ್ಣಪ್ರಸಾದ್ ಮಾಡಬಾಕಿಲು, ಭವಾನಿಶಂಕರ ಎನ್, ಎಸ್.ಪಿ. ಮಹಾದೇವ,
ಎಸ್.ಎನ್ . ಮನ್ಮಥ, ಪ್ರವೀಣ್ ಕುಮಾರ್, ಪುಟ್ಟಣ್ಣ ಗೌಡ ನಾಯರ್ಕಲ್ಲು ಉಪಸ್ಥಿತರಿರುತ್ತಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳು
ಬೆಳಗ್ಗೆ ಗಂಟೆ 9-00 ರಿಂದ 10-00ರ ವರೆಗೆ ಸ್ಯಾಾಕ್ಸೋಫೋನ್ ವಾದನ-ಲಿಖಿತಾ ಗೌಡ ಕುಕ್ಕೆ ಸುಬ್ರಹ್ಮಣ್ಯ ಮತ್ತು ಬಳಗದವರಿಂದ , ಮಧ್ಯಾಾಹ್ನ ಗಂಟೆ 3-00 ರಿಂದ 5-00ರ ವರೆಗೆ ಗಾಯಕ ಪುತ್ತೂರು ಜಗದೀಶ್ ಅಚಾರ್ಯ ಮತ್ತು ಬಳಗದಿಂದ
ಸಂಗೀತ ಗಾನ ಕಾರ್ಯಕ್ರಮ, ರಾತ್ರಿಗಂಟೆ 7-00ರಿಂದ ನೃತ್ಯ – ಹಾಸ್ಯ ವೈಭವ – ಯಕ್ಷಗಾನ- ಪೈಲಾರು ಶಾಲಾ ವಿದ್ಯಾಾರ್ಥಿಗಳು, ಶಾಲಾ ಹಿರಿಯ ವಿದ್ಯಾಾರ್ಥಿಗಳು,
ಶೌರ್ಯ ಯುವತಿ ಮಂಡಲ ಪೈಲಾರು, ಸುಳ್ಯ ಬಾಯ್ಸ್,ಬಳಿಕ ಗೀತ ಸಂಭ್ರಮ ಕಾರ್ಯಕ್ರಮ ರಮೇಶ್ ಮೆಟ್ಟಿನಡ್ಕ ರವರಿಂದ ನಡೆಯಲಿರುವುದಾಗಿ ಸಂಘಟಕರು ತಿಳಿಸಿರುತ್ತಾರೆ.