ಲಗೋರಿ ಆಟ ರಾಷ್ಟ್ರ ಕ್ರೀಡೆಯಾಗಿ ಬೆಳಗಲಿ : ಎಸ್.ಅಂಗಾರ
ಪ್ರಥಮ: ಜೈ ಹನುಮಾನ್ ಲಗೋರಿಯನ್ಸ್ ಮಂಗಳೂರು
ದ್ವಿತೀಯ: ಗರುಡ ಚೊಕ್ಕಾಡಿ
ಯುವ ಸ್ಪೂರ್ತಿ ಸೇವಾ ಸಂಘ ಕಲ್ಮಡ್ಕ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಲಗೋರಿ ಅಸೋಸಿಯೇಶನ್, ಕರ್ನಾಟಕ ರಾಜ್ಯ ಲಗೋರಿ ಅಸೋಸಿಯೇಶನ್ ಇದರ ಆಶ್ರಯದಲ್ಲಿ ಆಹ್ವಾನಿತ ತಂಡಗಳ ಹೊನಲು ಬೆಳಕಿನ ಲೀಗ್ ಮಾದರಿಯ
ರಾಜ್ಯ ಮಟ್ಟದ ಲಗೋರಿ ಪಂದ್ಯಾಟ ಎ.23 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನ ಕಲ್ಮಡ್ಕದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸರಕಾರ ಬಂದರು ಮೀನುಗಾರಿಕೆ ಸಚಿವರಾದ ಎಸ್.ಅಂಗಾರ ನೆರವೇರಿಸಿದರು. ಬಳಿಕ ಮಾತನಾಡಿದ ಸಚಿವರು ಲಗೋರಿ ಆಟ ರಾಷ್ಟ್ರ ಮಟ್ಟದ ಕ್ರೀಡೆಯಾಗಿ ಸೇರ್ಪಡೆಯಾಗಬೇಕು ಎಂದು ಹೇಳಿದರು. ಪಂದ್ಯಾವಳಿಯಲ್ಲಿ ಎಂಟು ತಂಡಗಳು ಭಾಗವಹಿಸಿದ್ದವು ಅದರಲ್ಲಿ ಜೈ ಹನುಮಾನ್ ಲಗೋರಿಯನ್ಸ್ ಮಂಗಳೂರು,ಯುವಶಕ್ತಿ ಪೆರಾಜೆ,ಪಂಚಶ್ರೀ ಪಂಜ ಸ್ಫೋಟ್ಸ್ ಕ್ಲಬ್ , ಲಗೋರಿ ಟೀಮ್ ಮಂಡ್ಯ, ಗರುಡ ಚೊಕ್ಕಾಡಿ,ಲಗೋರಿ ಟೀಮ್ ಕೊಡಗು,ಲಗೋರಿ ಟೀಮ್ ಚಿಕ್ಕಮಗಳೂರು,ಯುವ ಸ್ಫೂರ್ತಿ ಕಲ್ಮಡ್ಕ ತಂಡಗಳು ಭಾಗವಹಿಸಿದ್ದವು.
ಸನ್ಮಾನ : ಇತ್ತೀಚೆಗೆ ಮೇಜರ್ ಹುದ್ದೆಯನ್ನು ಪಡೆದುಕೊಂಡ ಪ್ರಶಾಂತ್ ಗೋಳ್ತಾಜೆಯವರನ್ನು ಯುವ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕರ್ನಾಟಕ ಲಗೋರಿ ಎಸೋಶಿಯೇಶನ್ ನ ಅಧ್ಯಕ್ಷರಾದ ದೊಡ್ಡಣ್ಣ ಬರಮೇಲು, ಜಿಲ್ಲಾ ಲಗೋರಿ ಎಸೋಶಿಯೇಶನ್ ನ ಅಧ್ಯಕ್ಷರಾದ ಶಿವರಾಮ ಏನೆಕಲ್ಲು, ಅಂತರಾಷ್ಟ್ರೀಯ ಕ್ರೀಡಾ ಪಟು ರಮೇಶ್ ಬೆಟ್ಟ ಮಾಳಪ್ಪಮಕ್ಕಿ,ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ್ತಿ ವನಿತಾ ಸಚಿತ್ ಪೆರಿಯಪ್ಪು ಇವರುಗಳಿಗೆ ಸನ್ಮಾನಿಸಲಾಯಿತು.
ಸಭಾಧ್ಯಕ್ಷತೆಯನ್ನು ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ದಯಾನಂದ ಕೇರ್ಪಳ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಪಿ.ಜಿ.ಎಸ್.ಎನ್.ಪ್ರಸಾದ್ ಬಾಳಿಲ, ಸಾರ್ವಜನಿಕ ದೇವತಾರಧನಾ ಸಮಿತಿ ಬಾಳಿಲದ ಗೌರವಾಧ್ಯಕ್ಷರಾದ ರಾಧಾಕೃಷ್ಣ ರಾವ್ ಯು ಬಾಳಿಲ, ಕಾಚಿಲ ಶ್ರೀ ಮಹಾವಿಷ್ಣು ದೇವಸ್ಥಾನದ ಮೋಕ್ತೆಸರರಾದ ರಾಮಚಂದ್ರ ಎಡಪತ್ಯ, ಬೆಳ್ಳಾರೆ ಆರಕ್ಷಕ ರಾಣೆಯ ಪೋಲೀಸ್ ಉಪನಿರಿಕ್ಷಕರಾದ ರುಕ್ಮ ನಾಯ್ಕ್,ಕ ಲ್ಮಡ್ಕ ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಲಕ್ಷ್ಮಿ ನಾರಾಯಣ ನಡ್ಕ,ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹಾಜಿರಾ ಗಫೂರ್,ಪಂಬೆತ್ತಾಡಿ ಪ್ರಾ.ಕೃ.ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಾಕೆ ಮಾಧವ ಗೌಡ, ಕಲ್ಮಡ್ಕ ಗ್ರಾಮ ಪಂಚಾಯತ್ ನ ಸದಸ್ಯರಾದ ಲೋಕೇಶ್ ಆಕ್ರಿಕಟ್ಟೆ, ಕಲ್ಮಡ್ಕ ಸ.ಹಿ.ಪ್ರಾ ಶಾಲೆ ಪ್ರಭಾರ ಮುಖ್ಯೋಪಾದ್ಯಾರಾದ ಶ್ರೀಮತಿ ವಜ್ರಾಕ್ಷಿ ಶ್ರೀಕಾಂತ್,ಯುವ ಸ್ಪೂರ್ತಿ ಯುವ ಗೌರವ ಸ್ವೀಕರಿಸಿದ ಮೇಜರ್ ಪ್ರಶಾಂತ್ ಗೋಳ್ತಾಜೆ, ಕರ್ನಾಟಕ ರಾಜ್ಯ ಲಗೋರಿ ಅಸೋಸಿಯೇಶನ್ ನ ಅಧ್ಯಕ್ಷರಾದ ದೊಡ್ಡಣ್ಣ ಬರಮೇಲು, ಜಿಲ್ಲಾ ಲಗೋರಿ ಅಸೋಸಿಯೇಶನ್ ನ ಅಧ್ಯಕ್ಷರಾದ ಶಿವರಾಮ ಏನೆಕಲ್ಲು, ಅಂತರಾಷ್ಟ್ರೀಯ ಕ್ರೀಡಾ ಪಟು ರಮೇಶ್ ಬೆಟ್ಟ ಮಾಳಪ್ಪಮಕ್ಕಿ, ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ್ತಿ ಶ್ರೀಮತಿ ವನಿತಾ ಸಚಿತ್ ಪೆರಿಯಪ್ಪು, ಶ್ರೀ ರಾಮ ಸೇವಾ ಟ್ರಸ್ಟ್ ಕಾಚಿಲದ ಅಧ್ಯಕ್ಷರಾದ ಗೋವಿಂದ ಭಟ್ ಸಾಕೇತ, ಪಂಚಶ್ರೀ ಜೇಸಿಸ್ ಪಂಜದ ಅಧ್ಯಕ್ಷರಾದ ಶಿವಪ್ರಸಾದ್ ಹಾಲೆಮಜಲು, ಪಂಚಶ್ರೀ ಸ್ಫೋಟ್ಸ್೯ ಕ್ಲಬ್ ಪಂಜದ ಪವನ್ ಪಲ್ಲತ್ತಡ್ಕ, ಪಂಬೆತ್ತಾಡಿ ಪಂಚಶ್ರೀ ಯುವಕ ಮಂಡಲದ ಅಧ್ಯಕ್ಷರಾದ ನಾಗಪ್ಪ ಗೌಡ ಪಂಜದಬೈಲು, ಪ್ರಗತಿ ಗೆಳೆಯರ ಬಳಗ ಪಡ್ಪಿನಂಗಡಿಯ ಅಧ್ಯಕ್ಷರಾದ ಗಣೇಶ್ ಪಡ್ಪಿನಂಗಡಿ ಉಪಸ್ಥಿತರಿದ್ದರು.ಈ ಸಂಧರ್ಭದಲ್ಲಿ ವಿಜೇತ ತಂಡಗಳಾದ ಜೈ ಹನುಮಾನ್ ಲಗೋರಿಯನ್ಸ್ ಮಂಗಳೂರು,ಗರುಡ ಚೊಕ್ಕಾಡಿ,ಯುವಶಕ್ತಿ ಪೆರಾಜೆ,ಚಿಕ್ಕಮಗಳೂರು ಈ ತಂಡಗಳಿಗೆ ಬಹುಮಾನ ವಿತರಿಸಲಾಯಿತು.