ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ದ.ಕ. ಜಿ.ಪಂ. ಸ್ವಚ್ಛಭಾರತ್ ಮಿಷನ್ ವತಿಯಿಂದ ಸುಳ್ಯ ತಾ.ಪಂ. ಮತ್ತು ಜಾಲ್ಸೂರು ಗ್ರಾ.ಪಂ. ಸಹಯೋಗದಲ್ಲಿ ಬಯಲು ಕಸ ಮುಕ್ತ ಗ್ರಾಮ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಜಾಲ್ಸೂರಿನ ಸ್ವಚ್ಛಕಿರಣ ಸ್ವಚ್ಛತಾ ಗುಂಪಿನ ವತಿಯಿಂದ ಸ್ವಚ್ಛತಾ ಕಾರ್ಯಕ್ರಮವು ಕುಕ್ಕಂದೂರಿನಿಂದ ಸೋಣಂಗೇರಿವರೆಗೆ ಎ.24ರಂದು ನಡೆಯಿತು.
ಸ್ವಚ್ಛಕಿರಣ ಸ್ವಚ್ಛತಾ ಗುಂಪಿನ ಐದನೇ ಸ್ವಚ್ಛತಾ ಕಾರ್ಯಕ್ರಮವು ಕುಕ್ಕಂದೂರು ಸಿ.ಆರ್.ಸಿ. ಹಾಗೂ ಸೋಣಂಗೇರಿಯವರೆಗೆ ನಡೆಯಿತು.
ಈ ಸಂದರ್ಭದಲ್ಲಿ ಜಾಲ್ಸೂರು ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಯಂ. ಬಾಬು ಕದಿಕಡ್ಕ, ಉಪಾಧ್ಯಕ್ಷೆ ಶ್ರೀಮತಿ ಲೀಲಾವತಿ ವಿನೋಬನಗರ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸುಬ್ಬಯ್ಯ ಕೆ.ಪಿ., ಪಂಚಾಯತಿ ಸಿಬ್ಬಂದಿ ಚಿದಾನಂದ, ಸ್ವಚ್ಛಕಿರಣ ಗುಂಪಿನ ಸದಸ್ಯರುಗಳಾದ ವಿನೋದ್ ಕುಮಾರ್ ಮಹಾಬಲಡ್ಕ, ಕೃಷ್ಣಪ್ಪ ನಾಯ್ಕ ಮಹಾಬಲಡ್ಕ, ಸುಚಿತ್ರ ಬಿ.ಎನ್, ಪ್ರೇಮ, ಬೇಬಿ, ಅಮ್ಮುಣಿ, ಸತ್ಯಶಾಂತಿ ತ್ಯಾಗಮೂರ್ತಿ ಸೋಣಂಗೇರಿ, ಗ್ರಾ.ಪಂ. ಸದಸ್ಯರಾದ ಶ್ರೀಮತಿ ಅಂಬಿಕಾ, ಈಶ್ವರ ನಾಯ್ಕ ಸೇರಿದಂತೆ ಕುಕ್ಕಂದೂರು ಸಿ. ಆರ್.ಸಿ. ಕಾಲನಿ ನಿವಾಸಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.