ಬೈಕ್ ಅಪಘಾತದಿಂದ ಗಂಭೀರ ಗಾಯಗೊಂಡು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೆರಾಜೆ ಗ್ರಾಮದ ನಿಡ್ಯಮಲೆ (ಪುತ್ಯ) ಜಯರಾಮ ಎನ್.ಎಂ. ರವರ ಪುತ್ರ ಸಿನಿತ್ (26) ಎ.24 ರಂದು ಮುಂಜಾನೆ ಕೊನೆಯುಸಿರೆಳೆದಿರುವುದಾಗಿ ತಿಳಿದು ಬಂದಿದೆ.
ಎ.7 ರಂದು ಸುಳ್ಯದಿಂದ ಬೈಕ್ನಲ್ಲಿ ಗುತ್ತಿಗಾರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಕಂದಡ್ಕ ಸೇತುವೆಗೆ ಬೈಕ್ ಗುದ್ದಿತು. ಪರಿಣಾಮ ಬೈಕ್ನಲ್ಲಿದ್ದ ಸಿನಿತ್ ರಸ್ತೆಗೆ ಎಸೆಯಲ್ಪಟ್ಟು, ತಲೆಗೆ ಗಂಭೀರ ಗಾಯವಾಯಿತು. ಗಾಯಗೊಂಡ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ವೈದ್ಯರ ಸಲಹೆ ಮೇರೆಗೆ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಎ.೨೪ರಂದು ಮುಂಜಾನೆ ಕೊನೆಯುಸಿರೆಳೆದರು.
ಸಿನಿಲ್ ಸುಳ್ಯದ ಗ್ಯಾರೆಜೊಂದರಲ್ಲಿ ಕೆಲ ತಿಂಗಳು ಕೆಲಸ ಮಾಡಿ, ಬಳಿಕ ಹೋಟೆಲ್ಗಳಲ್ಲಿಯೂ ಕೆಲಸ ಮಾಡಿದ್ದರು. ಬಳಿಕ ಮನೆಯಲ್ಲೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಮೃತರು ತಂದೆ, ತಾಯಿ ವಂಸತಿ, ಅಣ್ಣ ಶರತ್, ಅಕ್ಕ ಧನ್ಯ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.