ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯವರಿಗೆ ತರಾಟೆ ಮರ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಊರವರು ಮಂಡೆಕೋಲಿನಲ್ಲಿ ತಡೆದು ಮರ ಸಾಗಿಸುತ್ತಿದ್ದವರನ್ನು ಪ್ರಶ್ನಿಸಿದ ಮತ್ತು ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯವರನ್ನು ತರಾಟೆಗೆತ್ತಿಕೊಂಡ ಘಟನೆ ನಡೆದಿದೆ.
ಎ.೨೩ರಂದು ಸಂಜೆ ೭ ಗಂಟೆ ವೇಳೆಗೆ ಮಂಡೆಕೋಲು ಪೇಟೆಯಲ್ಲಿ ಮರವನ್ನು ತುಂಬಿಕೊಂಡು ಕೆಎ ೨೧ ಬಿ ೦೮೧೧ ಲಾರಿ ಬಂತೆಂದು ಇದನ್ನು ಮ0ಡೆಕೋಲಿನಲ್ಲಿ ಯುವಕರ ತಂಡ ತಡೆದು ನಿಲ್ಲಿಸಿತು.
ಬಳಿಕ ಅವರೊಂದಿಗೆ ದಾಖಲೆ ಕೇಳಿದಾಗ ಲಾರಿ ಚಾಲಕನಲ್ಲಿ ಮರ ಸಾಗಾಟಕ್ಕೆ ದಾಖಲೆ ಇರಲಿಲ್ಲವೆನ್ನಲಾಗಿದೆ. ಲಾರಿ ತಡೆದವರು ಚಾಲಕನನ್ನು ಪ್ರಶ್ನಿಸಿದಾಗ ಇದು ಮೈತಡ್ಕ ಪ್ಲಾಂಟೆಷನ್ ನಿಂದ ತರುತ್ತಿದ್ದು ಕಣ್ಣೂರಿಗೆ ಕೊಂಡು ಹೋಗುತ್ತಿzವೆ. ಅರಣ್ಯ ಇಲಾಖೆಯವರ ಜತೆ ಹೇಳಿಯೇ ಮರ ಕೊಂಡು ಹೋಗುತ್ತಿರುವುದಾಗಿ ಹೇಳಿದರೆನ್ನಲಾಗಿದೆ. ಮರ ಹಿಡಿದ ವಿಷಯ ತಿಳಿದು ಫಾರೆಸ್ಟರ್ ಯಶೋಧರ, ಗಾರ್ಡ್ ಸ್ಥಳಕ್ಕೆ ಬಂದರೆಂದೂ ಈ ವೇಳೆ ಊರವರು ಫಾರೆಸ್ಟರ್ರನ್ನು ತರಾಟೆಗೆತ್ತಿಕೊಂಡರೆಂದೂ ತಿಳಿದು ಬಂದಿದೆ. ಬಳಿಕ ಲಾರಿಯನ್ನು ಅರಣ್ಯ ಇಲಾಖೆಯವರು ಮಂಡೆಕೋಲು ಅರಣ್ಯ ಕಚೇರಿಗೆ ಕೊಂಡು ಹೋದರೆಂದು ತಿಳಿದು ಬಂದಿದೆ. ವಿಷಯ ತಿಳಿದು ೫೦ ಕ್ಕೂ ಅಧಿಕ ಮಂದಿ ಊರವರು ಸ್ಥಳದಲ್ಲಿ ಸೇರಿದ್ದರೆಂದೂ ತಿಳಿದು ಬಂದಿದೆ.
ಈ ಕುರಿತು ಫಾರೆಸ್ಟರ್ ಯಶೋಧರರನ್ನು ಸಂಪರ್ಕಿಸಿ ವಿಚಾರಿಸಿದಾಗ, “ಪೇರಾಲು ಮತ್ತು ನಾರಾಲಿನಲ್ಲಿ ಪ್ಲಾಂಟೇಷನ್ನಲ್ಲಿ ಹೈಬ್ರಿಡ್ ಅಕೇಶಿಯಾ ಹಾಗೂ ಮ್ಯಾಂಜಿಯಮ್ ಮರಗಳನ್ನು ಕಡಿಯಲಾಗುತ್ತಿದೆ. ಮರ ಕೊಂಡು ಹೋಗುವವರು ಅರ್ಜಿ ಕೊಟ್ಟು, ಎಲ್ಲ ದಾಖಲೆಯನ್ನು ನಮಗೆ ಒದಗಿಸಿದ್ದರು. ಆದರೆ ಸಾಗಾಟ ಮಾಡುವಾಗ ಮಾತ್ರ ಅವರಲ್ಲಿ ದಾಖಲೆಯ ಪ್ರತಿ ಇಲ್ಲದಿರುವುದರಿಂದ ಈ ರೀತಿ ಆಗಿದೆ. ಈಗ ಮರವನ್ನು ನಾವು ವಶಕ್ಕೆ ಪಡೆದಿzವೆ” ಎಂದು ಹೇಳಿದರು.
ಲಾರಿ ತಡೆದ ಯುವಕ ತಂಡದಲ್ಲಿದ್ದ ಪ್ರಕಾಶರನ್ನು ವಿಚಾರಿಸಿದಾಗ “ಮರ ಸಾಗಾಟಕ್ಕೆ ದಾಖಲೆಗಳು ಬೇಕು. ಅವರಲ್ಲಿ ಒಂದೇ ಒಂದು ದಾಖಲೆಯೂ ಇರಲಿಲ್ಲ. ಮೈತಡ್ಕದಿಂದ ಕಣ್ಣೂರಿಗೆ ಕೊಂಡು ಹೋಗುವುದಾಗಿ ಚಾಲಕ ನಮ್ಮಲ್ಲಿ ಹೇಳಿದ. ಮರ ಸಾಗಾಟದಲ್ಲಿ ಅರಣ್ಯ ಇಲಾಖೆಯ ವರು ಸೇರಿಕೊಂಡಿದ್ದಾರೆಂದು ನಮಗೆ ಅನಿಸುತ್ತಿದೆ” ಎಂದು ಹೇಳಿದರು.