ಸವಣೂರು ಕೆ.ಸೀತಾರಾಮ ರೈ ಯವರಿಗೆ ಅಭಿನಂದನಾ ಸಮಾರಂಭ
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಹಾಗೂ ಸಿಬ್ಬಂದಿ ವರ್ಗದವರ ಜಂಟಿ ಆಶ್ರಯದಲ್ಲಿ ಸುಳ್ಯ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಹಾಗೂ ಬಾಲಕ ಮತ್ತು ಬಾಲಕಿಯರ 5 ನೇ ವರುಷದ ಡಬಲ್ಸ್ ಶೆಟಲ್ ಬ್ಯಾಡ್ ಮಿಂಟನ್ ಪಂದ್ಯಾಟ ಉತ್ಕರ್ಷ ಸಹಕಾರ ಟ್ರೋಫಿ-2022 ಮತ್ತು ‘ಸಹಕಾರ ರತ್ನ’ಪ್ರಶಸ್ತಿ ಪುರಸ್ಕೃತರಾದ ಸವಣೂರು
ಕೆ. ಸೀತಾರಾಮ ರೈ ರವರಿಗೆ ಅಭಿನಂದನಾ ಸಮಾರಂಭವು ಮೇ.1.ರಂದು ಪಂಜ ಉತ್ಕರ್ಷ ಸಹಕಾರ ಸೌಧ ವಠಾರದಲ್ಲಿ ಜರುಗಲಿದೆ.
ಕಾರ್ಯಕ್ರಮವನ್ನು ರಾಷ್ಟ್ರೀಯ ಕಬಡ್ಡಿ ,ಖೋಖೋ ತರಬೇತುದಾರ ಮಾಧವ ಬಿ.ಕೆ ರವರು ಉದ್ಘಾಟಿಸಲಿದ್ದಾರೆ.ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಎಸ್ .ಸಿ.
.ಡಿ.ಸಿ.ಸಿ ಬ್ಯಾಂಕ್ ಪಂಜ ಶಾಖಾ ವ್ಯವಸ್ಥಾಪಕ ಕೊರಗಪ್ಪ ಗೌಡ ಅತಿಥಿಯಾಗಿ, ಜೇಸಿಐ ಪಂಜ ಪಂಚಶ್ರೀ ಪೂರ್ವಾಧ್ಯಕ್ಷ ಸೋಮಶೇಖರ ನೇರಳ ಗೌರವ ಉಪಸ್ಥಿತರಿರುವರು. ರಾತ್ರಿ ಗಂಟೆ 7ಕ್ಕೆ ಅಭಿನಂದನಾ ಸಮಾರಂಭದಲ್ಲಿ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ ಸಭಾಧ್ಯಕ್ಷತೆ ವಹಿಸಲಿದ್ದಾರೆ. ‘ಸಹಕಾರ ರತ್ನ’ ಪ್ರಶಸ್ತಿ ಪುರಸ್ಕೃತ ಸವಣೂರು ಕೆ.ಸೀತಾರಾಮ ರೈ ರವರು ಸನ್ಮಾನ ಸ್ವೀಕರಿಸಲಿದ್ದಾರೆ. ಎಸ್.ಸಿ.ಡಿ.ಸಿ.ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು ಮುಖ್ಯ ಅತಿಥಿಯಾಗಿ.ಹಾಗೂ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪೂರ್ವಾಧ್ಯಕ್ಷರಾದ ಆನಂದ ಗೌಡ ಕಂಬಳ, ರವೀಂದ್ರನಾಥ ಶೆಟ್ಟಿ ಕೇನ್ಯ, ಚಂದ್ರಶೇಖರ ಶಾಸ್ತ್ರಿ ಚಿರಶ್ಯಾಮಲ ಗೌರವ್ ಉಪಸ್ಥಿತರಿರುವರು.ಸುಳ್ಯ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿ ಮತ್ತು ಸಿಬ್ಬಂದಿವರ್ಗ ವಿಭಾಗ ಹಾಗೂ ಬಾಲಕ, ಬಾಲಕಿಯರ ವಿಭಾಗದಲ್ಲಿ ಪಂದ್ಯಾಟ
ಜರುಗಲಿದೆ.ಪಂದ್ಯಾಟ ಅಪರಾಹ್ನ ಗಂಟೆ 1.30ಕ್ಕೆ ಆರಂಭ ಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.