ದುಗ್ಗಲಡ್ಕದ ಶ್ರೀ ದುಗ್ಗಲಾಯ ಮಕ್ಕಳ ಯಕ್ಷಗಾನ ಕಲಾ ಸಂಘದ ಎರಡನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಯಕ್ಷ ವೈಭವ ಮತ್ತು ಸಾಂಸ್ಕೃತಿಕ ವೈವಿಧ್ಯ ಹಾಗೂ ಸನ್ಮಾನ ಸಮಾರಂಭ ಎ.30 ರಂದು ದುಗ್ಗಲಡ್ಕದ ಅಯ್ಯಪ್ಪ ಭಜನಾ ಮಂದಿರದ ವಠಾರದಲ್ಲಿ ನಡೆಯಲಿದೆ.
ಸಂಜೆ ಸ್ಥಳೀಯ ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ವೈವಿಧ್ಯ, ಬಳಿಕ ಹರಿದರ್ಶನ ಯಕ್ಷಗಾನ ಪ್ರದರ್ಶನ,7.30ಕ್ಕೆ ಸಭಾ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮ ನಡೆದು ನಂತರ ಷಣ್ಮುಖ ವಿಜಯ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಸಂಘದ ಅಧ್ಯಕ್ಷರಾದ ಯತೀಶ್ ರೈ ದುಗ್ಗಲಡ್ಕ, ಸಂಚಾಲಕರಾದ ಬಾಲಕೃಷ್ಣ ನಾಯರ್ ಹಾಗೂ ಕಾರ್ಯದರ್ಶಿ ಗಾಯತ್ರಿ ಲೋಕೇಶ್ ತಿಳಿಸಿದ್ದಾರೆ.