ಅಧ್ಯಕ್ಷ : ರತ್ನಾಕರ ರೈ, ಕಾರ್ಯದರ್ಶಿ: ಪ್ರೀತಿಕ್ ಕುಲಾಲ್
ಆಲೆಟ್ಟಿ ಗ್ರಾಮದ ಅರಂಬೂರು ಶ್ರೀ ಮೂಕಾಂಬಿಕಾ ಭಜನಾ ಮಂದಿರದ ವಾರ್ಷಿಕ ಮಹಾಸಭೆಯು ಮಂದಿರದ ಅಧ್ಯಕ್ಷ ಕೆ.ಎಸ್ ಕೃಷ್ಣಪ್ಪ ರವರ ಅಧ್ಯಕ್ಷತೆಯಲ್ಲಿ ಎ.24ರಂದು ಭಜನಾ ಮಂದಿರದ ಸಭಾಭನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಶ್ರೀಪತಿ ಭಟ್ ಮಜಿಗುಂಡಿ,
ಅಧ್ಯಕ್ಷರಾಗಿ ರತ್ನಾಕರ ರೈ ಅರಂಬೂರು, ಕಾರ್ಯದರ್ಶಿಯಾಗಿ ಪ್ರೀತಿಕ್ ಕುಲಾಲ್, ಕೋಶಾಧಿಕಾರಿ ಶಿವಪ್ರಸಾದ್ ಅರಂಬೂರು, ಉಪಾಧ್ಯಕ್ಷರಾಗಿ ಬಂಗಾರು ಭಾರಧ್ವಾಜ್, ಹಾರಾವತಿ ಕೆ.ಸಿ, ಕುಸುಮಾಧರ,
ಸದಸ್ಯರಾಗಿ ಆಶಾ ಮಜಿಗುಂಡಿ, ಭರತ್ ನೆಡ್ಚಿಲು,ಜೀವನ್ ರೈ ಅರಂಬೂರು, ದೇವಿಪ್ರಸಾದ್, ಪರಮೇಶ್ವರ, ನವೀನ್, ರೋಶನ್, ಪ್ರಭಾಕರ ರೈ, ರಾಜ ಪಡ್ಪು, ಶೋಭಾ ಸುಬ್ಬಣ್ಣ ರೈ, ಗುರುರಾಜ್, ವೆಂಕಟೇಶ್, ಭಜನಾ ಸಂಘದ ಮುಖ್ಯಸ್ಥರಾಗಿ ಸೀತಾರಾಮ ಪ್ರಭು ರವರನ್ನು ಆಯ್ಕೆ ಮಾಡಲಾಯಿತು. ಕಾವ್ಯ ಕುಲಾಲ್ ಪ್ರಾರ್ಥಿಸಿದರು. ರಾಜಶೇಖರ್ ಎನ್. ವಂದಿಸಿದರು. ಬಾಲಕೃಷ್ಣ ಕುಲಾಲ್ ವಂದಿಸಿದರು.